ಬಾಗಲಕೋಟೆ :ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತದಿಂದ ನಾಲ್ವರು ಶಾಲಾ ಮಕ್ಕಳು ಮೃತಪಟ್ಟಿರುವ ಘಟನೆ ಮನ ಕಲಕುವಂತೆ ಮಾಡಿದ್ದು, ಇಂತಹ ಘಟನೆ ಮರುಕಳುಹಿಸದಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಪಘಾತ ಸಂಭವಿಸಿದ ಸ್ಥಳಕ್ಕೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಿರಿ ಆದರೆ, ಅಪಘಾತವಾಗಲು ಏನು ಕಾರಣ. ರಸ್ತೆ ನಿರ್ಮಾಣದಲ್ಲಿ ಲೋಪವೇನಾದರೂ ಇದೇ ಎಂದು ಪ್ರಶ್ನಿಸಿದರು. ಅಲ್ಲದೇ ಡಿಸೆಂಬರ ತಿಂಗಳಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸಿದ್ದು, ಪ್ರಾಣಹಾನಿ ಕೂಡಾ ಸಂಭವಿಸಿವೆ. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ಸಮೀಕ್ಷೆ ಮಾಡಿರುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಇತ್ತೀಚಿಗೆ ಸಂಭವಿಸಿದ ರಸ್ತೆ ಅಪಘಾತ ಸ್ಥಳಗಳಿಗೆ ೨೪ ಗಂಟೆಯೊಳಗಾಗಿ ಸಮೀಕ್ಷೆ ಕೈಗೊಲ್ಲದೇ ಇರುವÀ ಬಗ್ಗೆ ಪೊಲೀಸ್ ಇಲಾಖೆ ತಿಳಿಸಿದ್ದು, ಕಡ್ಡಾಯವಾಗಿ ಪೊಲೀಸ್, ಪ್ರಾದೇಶಿಕ ಸಾರಿಗೆ ಹಾಗೂ ಲೋಕೋಪಯೋಗಿ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ಕಾಟಾಚಾರ ಸಮೀಕ್ಷೆ ಕೈಗೊಳ್ಳದೇ ಮುಂದೆ ಅಂತಹ ವಲಯಗಳಲ್ಲಿ ಅಪಘಾತ ಸಂಭವಿಸದAತೆ ಏನು ಕ್ರವಹಿಸಬೇಕಿದೆ ಅದನ್ನು ತುರ್ತಾಗಿ ಕೈಗೊಳ್ಳಬೇಕು. ಈ ಕಾರ್ಯದಲ್ಲಿ ಬೇಜವಾಬ್ದಾರಿ ವಹಿಸಿದ ಅಧಿಕಾರಿಗಳ ಮೇಲೆ ನಿರ್ಧಾಕ್ಷಣ್ಯವಾಗಿ ಶಿಸ್ತುಕ್ರಮ ವಹಿಸಲಾಗುವುದೆಂದು ತಿಳಿಸಿದರು. ಶಾಲಾ ಕಾಲೇಜುಗಳಲ್ಲಿ ರಸ್ತೆ ನಿಯಮಗಳ ಬಗ್ಗೆ ಅರಿವು ಕಾರ್ಯಾಗಾರ ಹಮ್ಮಿಕೊಳ್ಳಲು ತಿಳಿಸಿದರು.
ಜಮಖಂಡಿ ತಾಲೂಕಿನಲ್ಲಾದ ಭೀಕರ ಅಪಘಾತದ ಪೂರ್ವದಲ್ಲಿಯೇ ಅನಗವಾಡಿ, ಅಮೀನಗಡದಲ್ಲಿ ರಸ್ತೆ ಅಪಘಾತದಿಂದ ಸಾವು ಸಂಭವಿಸಿವೆ. ಈ ಬಗ್ಗೆ ಏನು ಕ್ರಮವಹಿಸಿದ್ದರಿ. ಅಪಘಾತಗಳು ಹೆಚ್ಚಾಗಿ ಕಬ್ಬು ಸಾಗಿಸುವ ಟ್ಯಾಕ್ಟರಗಳಿಂದ ಉಂಟಾಗಿದ್ದು, ಟ್ಯಾಕ್ಟರ ಚಾಲಕರು ಚಾಲನಾ ಲೈಸನ್ಸ್ ಪಡೆದೇ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಕೆಲವೊಂದು ಟ್ಯಾಕ್ಟರಗೆ ರಿಪ್ಲೇಕ್ಟರ ಹಾಕುತ್ತಿಲ್ಲ. ಅಂತಹ ಟ್ಯಾಕ್ಟರ ಜಪ್ತ ಮಾಡುವದಲ್ಲದೇ ಚಾಲಕನ ಮೇಲೆ ಕ್ರಮಜರುಗಿಸಲು ಸೂಚಿಸಿದರು. ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿರುವ ರಾಷ್ಟಿçÃಯ ಹೆದ್ದಾರಿಯಲ್ಲಿ ೧೫, ರಾಜ್ಯ ಹೆದ್ದಾರಿಯಲ್ಲಿ ೧೪ ಸೇರಿ ಒಟ್ಟು ೨೯ ಅಪಘಾತ ವಲಯಗಳನ್ನು ಗುರುತಿಸಿದ್ದು, ಆ ವಲಯದಲ್ಲಿ ಅಪಘಾತ ಸಂಭವಿಸದAತೆ ಸೂಕ್ತ ಕ್ರಮವಹಿಸಲು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಸ್ತೆ ಅಪಘಾತ ತಡೆಗೆ ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಾಗದು. ಇತರೆ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಡಿಸೆಂಬರ ಮತ್ತು ಜನವರಿ ಮಾಹೆಯಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿದೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ಇರುವ ೧೫ ಸಕ್ಕರೆ ಕಾರ್ಖಾನೆಗಳ ಕಬ್ಬು ನುರಿಸುವ ಕಾರ್ಯ ನಡೆಯುತ್ತಿದ್ದು, ಒಂದೊAದು ಸಕ್ಕರೆ ಕಾರ್ಖಾನೆಗಳಿಂದ ೨ ಸಾವಿರಕ್ಕಿಂತ ಹೆಚ್ಚು ಟ್ಯಾಕ್ಟರಗಳು ಕಬ್ಬು ಸಾಗಾಣಿಕೆ ಮಾಡುತ್ತಿವೆ. ಪ್ರತಿ ಟ್ಯಾಕ್ಟರಗಳಿಗೆ ರಿಪ್ಲೇಕ್ಟರ ಅಳವಡಿಕೆಗೆ ಕ್ರಮಹಿಸಬೇಕು. ಧ್ವನಿವರ್ದಕಗಳನ್ನು ಬಂದ್ ಮಾಡಿಸಬೇಕಿದೆ ಎಂದರು.
ಕಳೆದ ೨೦೨೨ ಮತ್ತು ೨೦೨೩ಕ್ಕೆ ಹೋಲಿಸಿದಾಗ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚಿಗೆ ಆಗಿದೆ. ಆದ್ದರಿಂದ ಅಪಘಾತಗಳಿಂದ ಉಂಟಾಗುವ ಸಾವುಗಳನ್ನು ತಪ್ಪಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಸಂಬAಧಿಸಿದ ಇಲಾಖೆಗಳು ಕೈಜೋಡಿಸಿದಲ್ಲಿ ೨೦೨೪ರಲ್ಲಿ ಸಾವಿನ ಸಂಖ್ಯೆಯನ್ನು ಶೇ.೩೦ ರಷ್ಟು ಕಡಿಮೆ ಮಾಡಬಹುದಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಓರ್ವ ನೋಡಲ್ ಅಧಿಕಾರಿ ನೇಮಿಸಬೇಕು. ಸದ್ಯ ಜಿಲ್ಲೆಯಲ್ಲಿ ೪೦ ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು, ಬ್ಯಾರಿಕೇಡ್, ಬೀಳಿ ಪಟ್ಟಿ, ಫಲಕಗಳ ಜೊತೆ ಬೆಳಕಿನ ವ್ಯವಸ್ಥೆ ಮಾಡಿದಾಗ ಮಾತ್ರ ಅಪಘಾತ ತಡೆಯಲು ಸಾಧ್ಯವೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನೀಯರ್ ರಾಜಶೇಖರ ಕಡಿವಾಲ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಎನ್.ಡಬ್ಲುಕೆಆರ್‌ಟಿಸಿ ಡಿಟಿಓ ಮೈತ್ರಿ, ನಗರಸಭೆ ಪೌರಾಯುಕ್ತ ರಮೇಶ ಜಾದವ, ರಾಷ್ಟಿçÃಯ ಹೆದ್ದಾರಿ ವಿಭಾಗದ ಅಧಿಕಾರಿ ಸಂತೋಷ ಸ್ಭೆರಿದಂತೆ ಇತರರು ಉಪಸ್ಥಿತರಿದ್ದರು.