ಜೈಶ್ರೀರಾಮ್ ಅಂದವರಿಗೆ ಜೈಲೇ ಗತಿ..!

ಜೈಶ್ರೀರಾಮ್ ಅಂದವರಿಗೆ ಜೈಲೇ ಗತಿ..!

ಬಾಗಲಕೋಟೆ: ಮಂಡ್ಯ ಜಿಲ್ಲೆ ಕರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿದ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟಕ್ಕೆ ತೀರ್ಮಾನಿಸಿದೆ.

ಈ ಕುರಿತು ಟ್ವಿಟ್ಟರ್ ‌ನಲ್ಲಿ ಹಿಂದೂಗಳಿಗೆ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ಸರ್ಕಾರದ ನಡೆಯನ್ನು ಟೀಕಿಸಲಾಗಿದೆ. ಅಲ್ಲದೇ ರಾಜ್ಯದ್ಯಂತ ಹೋರಾಟವನ್ನೂ ನಡೆಸುತ್ತಿದೆ.

ಎಕ್ಸ್ ನಲ್ಲಿ ಬಿಜೆಪಿ ಕರ್ನಾಟಕ ಖಾತೆಯಿಂದ ಟ್ವಿಟ್ ಮಾಡಿ ರಾಜ್ಯ ಕಾಂಗ್ರೆಸ್ ವಿದೇಶಿ ಮನಸ್ಥಿತಿಯನ್ನು ಹೊಂದಿದೆ ಎಂದು ಟೀಕಿಸಿದೆ‌‌.

ಔರಂಗಜೇಬನ ಫ್ಲೆಕ್ಸ್ ಗಳನ್ನು ಹಾಕಲು ಅವಕಾಶವಿದೆ ಆದರೆ ಊರಿನವರು ಸೇರಿ‌ ಹನುಮ ಧ್ವಜವನ್ನು ಹಾರಿಸುವಂತ್ತಿಲ್ಲ.

ಕೋಲಾರದಲ್ಲಿ ಕತ್ತಿಯ ಕಮಾನು ಹಾಕಬೋದು ಆದರೆ ಜೈ ಶ್ರೀರಾಮ ಎಂದವರಿಗೆ ಜೈಲು, ರಸ್ತೆಗಳಲ್ಲಿ ತಲ್ವಾರ ಹಿಡಿಯಬಹುದು ಹಿಂದೂಗಳು ಭಕ್ತಿಯಿಂದ ಭಜನೆ ಮಾಡುವಂತ್ತಿಲ್ಲ, ಬೀದಿಗಳಲ್ಲಿ ಇಫ್ತಾರ್ ಕೂಟ ನಡೆಸಬಹುದು, ಗಂಧದ ಕಡ್ಡಿ ಹಚ್ಚುವಂತ್ತಿಲ್ಲ. ಸರ್ಕಾರಿ ಮೈದಾನದಲ್ಲಿ ಬಕ್ರಿದ್ ಗೆ ಇರುವ ಅವಕಾಶ ಗಣೇಶೋತ್ಸವಕ್ಕಿಲ್ಲ ಎಂದು ಟೀಕಿಸಲಾಗಿದೆ.

ಪ್ರಭುಶ್ರೀರಸಮನ ಅಸ್ತಿತ್ವ ಪ್ರಶ್ನಿಸಿ, ರಾಮಸೇತು ವಿಚಾರದಲ್ಲಿ ರಾಮ ಯಾವ ಕಾಲೇಜಿನಲ್ಲಿ‌ ಕಲಿತ್ತಿದ್ದ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ರಾಮಮಂದಿರ ನಿರ್ಮಾಣ ಸಹಿಸದೆ ವಿಘ್ನ  ಸಂತೋಷಿಗಳಂತೆ ವರ್ತಿಸುತ್ತಿದೆ ಎಂದು ಆರೋಪಿಸಿದೆ.