ಗರ್ಭಪಾತ ಆಗಿದ್ದು ಹೌದು, ಇವರೇ ಕಾರಣ ಎಂದು ನಾನು‌ ಹೇಳಿಲ್ಲ

ಮಹಾಲಿಂಗಪೂರ ಪುರಸಭೆ ಸದಸ್ಯೆ ಚಾಂದಿನಿ‌ ನಾಯಕ್ ಪತಿ‌ ನಾಗೇಶ ಸ್ಪಷ್ಟ‌ನೆ

ಗರ್ಭಪಾತ ಆಗಿದ್ದು ಹೌದು, ಇವರೇ ಕಾರಣ ಎಂದು ನಾನು‌ ಹೇಳಿಲ್ಲ

ನಾಡನುಡಿ ನ್ಯೂಸ್

ಬಾಗಲಕೋಟೆ:
ನನ್ನ ಪತ್ನಿಗೆ ಗರ್ಭಪಾತ ಆಗಿದ್ದು ನಿಜ ಆದರೆ ಪುರಸಭೆ ಚುನಾವಣೆ ಸಂದರ್ಭದಲ್ಲಿ ಶಾಸಕರ ಥಳಿತದಿಂದಲೇ ನಡೆದಿದ್ದು ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ನಾಯಕ ಪತಿ ನಾಗೇಶ ನಾಯಕ ಸ್ಪಷ್ಟಪಡಿಸಿದ್ದಾರೆ.

ತಳ್ಳಾಟದಿಂದ ಆಗಿರಬಹುದು ಎಂದಿದ್ದು ನಿಜ. ಕೋರ್ಟು, ಸಾಕ್ಷಿ ಎಂಬ ವಿಚಾರ ಬಂದರೆ ನಿಖರವಾಗಿ ಹೇಳಲು ಬರುವುದಿಲ್ಲ ಎಂದಿದ್ದಾರೆ.

ನನ್ನ ಮನೆಯ ವಿಚಾರವಿದು. ಬಹಿರಂಗವಾಗಿ ಚರ್ಚೆ ನಡೆಯುತ್ತಿದೆ. ಗರ್ಭಪಾತ ಆಗಿರುವುದಂತೂ ನಿಜ ಆದರೆ ಪುರಸಭೆಯಲ್ಲಿ ನಡೆದ ಘಟನೆಯಿಂದಲೇ ಎಂಬುದನ್ನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.