ಪ್ರಚೋದನಕಾರಿ ಭಾಷಣ : ಇಬ್ಬರು ವಕೀಲರ ಮೇಲೆ ಬಾಗಲಕೋಟೆ ಠಾಣೆಯಲ್ಲಿ ಎಫ್ಐಆರ್
ಉದಯಪುರದ ದರ್ಜಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಭಾಷಣ ಮಾಡಿದ ಇಬ್ಬರು ವಕೀಲರ ವಿರುದ್ಧ ದೂರು ದಾಖಲಾಗಿದೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ಉದಯಪುರ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಭಾಷಣ ಮಾಡಿದ ಇಬ್ಬರು ವಕೀಲರ ಮೇಲೆ ಎಫ್ಐಆರ್ ದಾಖಲಾಗಿದೆ.
ಜೂ.೩೦ ರಂದು ವಿಶ್ವ ಹಿಂದು ಪರಿಷದ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಭಾಷಣ ಮಾಡಿದ್ದ ಕುಮಾರಸ್ವಾಮಿ ಹಿರೇಮಠ ಹಾಗೂ ಜು.೧ ರಂದು ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಭಾಷಣ ಮಾಡಿದ್ದ ಪ್ರಶಾಂತ ಪವಾರ ಅವರು ದ್ವೇಷ ಭಾವ ಮೂಡಿಸುವ ಮಾತುಗಳನ್ನಾಡಿದ್ದಾರೆ ಎಂದು ದೂರಿ ನಬಿಸಾಬ ಟಂಕಸಾಲಿ ಎಂಬುವವರು ದೂರು ದಾಖಲಿಸಿದ್ದಾರೆ.
ಇಬ್ಬರು ಮುಖಂಡರ ಮೇಲೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.