ಚರಂತಿಮಠ ಪ್ರಭುಸ್ವಾಮೀಜಿ ಸಂಚರಿಸುತ್ತಿದ್ದ ವಾಹನ ಪಲ್ಟಿ: ಶ್ರೀಗಳು ಪ್ರಾಣಾಪಯಾದಿಂದ ಪಾರು
![ಚರಂತಿಮಠ ಪ್ರಭುಸ್ವಾಮೀಜಿ ಸಂಚರಿಸುತ್ತಿದ್ದ ವಾಹನ ಪಲ್ಟಿ: ಶ್ರೀಗಳು ಪ್ರಾಣಾಪಯಾದಿಂದ ಪಾರು](https://nadanudi.com/uploads/images/2022/07/image_750x_62c59bdb77a74.jpg)
ನಾಡನುಡಿ ನ್ಯೂಸ್
ಬಾಗಲಕೋಟೆ
ಹುಬ್ಬಳ್ಳಿಯಿಂದ ಬೆಳಗಾವಿ ತೆರಳುವ ಮಾರ್ಗ ಮಧ್ಯದ ತೇಗೂರು ಕ್ರಾಸ್ ಬಳಿ ಬಾಗಲಕೋಟೆ ಚರಂತಿಮಠದ ಶ್ರೀಪ್ರಭು ಸ್ವಾಮೀಜಿ ಸಂಚರಿಸುತ್ತಿದ್ದ ವಾಹನ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶ್ರೀಗಳು ಸಂಚರಿಸುತ್ತಿದ್ದ ಕೆಎ ೬೯ ಎಂ ೧೯೪೪ ಸಂಖ್ಯೆ ಇನ್ನೋವಾ ವಾಹನ ಪಲ್ಟಿಯಾಗಿದ್ದು ಶ್ರೀಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.