ಮೈಸೂರು ದಸರಾದಲ್ಲಿ ಜಿಲ್ಲೆಯ ವೈಭವ ಸಾರಲಿದೆ ಟ್ಯಾಬ್ಲೊ
ಮುಧೋಳ ತಳಿ ಶ್ವಾನ, ಇಳಕಲ್ ಸೀರೆ, ಐಹೊಳೆ ದುರ್ಗಾ ದೇಗುಲ ಈ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿವೆ.
ಬಾಗಲಕೋಟೆ:
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ಇಳಕಲ್ ಸೀರೆ, ಐಹೊಳೆ ದುರ್ಗಾ ದೇವಸ್ಥಾನಹ ಹಾಗೂ ಮುಧೋಳ ತಳಿಯ ನಾಯಿಯ ಮಹತ್ವ ಸಾರುವ ಟ್ಯಾಬ್ಲೊ ಜಿಲ್ಲೆಯನ್ನು ಪ್ರತಿನಿಧಿಸಲಿವೆ.
ಅತ್ಯಂತ ಸುಂದರವಾಗಿ ಟ್ಯಾಬ್ಲೊ ರೂಪಗೊಂಡಿದ್ದು, ವಾಹನದ ಮುಂಭಾಗದಲ್ಲಿ ಮುಧೋಳ ತಳಿಯ ಶ್ವಾನವಿದ್ದರೆ ಮಧ್ಯದಲ್ಲಿ ಇಳಕಲ್ ಸೀರೆಯನ್ನು ನೇಯುತ್ತಿರುವ ಪ್ರತಿಕೃತಿ ಇರಿಸಲಾಗಿದೆ. ನಂತರ ಐತಿಹಾಸಿಕ ಐಹೊಳೆಯ ದುರ್ಗಾ ದೇವಸ್ಥಾದ ಆಕೃತಿ ಇದ್ದು, ನೋಡುಗರ ಗಮನಸೆಳೆಲಿದೆ.
ಚುರುಕುತನ, ವೇಗದ ಓಟಕ್ಕೆ ಹೆಸರಾಗಿರುವ ಮುಧೋಳ ಶ್ವಾನವೂ ಇತ್ತೀಚೆಗಷ್ಟೇ ಸೇನೆಗೂ ಸೇರ್ಪಡೆಗೊಂಡಿದೆ.
ಒಟ್ಟಾರೆ ಬಾಗಲಕೋಟೆ ವೈಭವ ಟ್ಯಾಬ್ಲೋ ಮೂಲಕ ಮೇಳೈಸಲಿದ್ದು, ಮೈಸೂರು ದಸರಾದಲ್ಲಿ ಬಾಗಲಕೋಟೆಯ ಟ್ಯಾಬ್ಲೊ ಜನರ ಗಮನಸೆಳೆಯುವುದು ನಿಶ್ಚಿತ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.