ಬೆಳಗಾವಿಗೆ ಹೋಗ್ತೀನಿ ಅಧಿವೇಶನಕ್ಕೆ ಹೋಗಲ್ಲ: ಈಶ್ವರಪ್ಪ ಮುನಿಸಿಗೆ ಕಾರಣ ಏನು..?

ಸಚಿವ ಸಂಪುಟದಲ್ಲಿ ಅವಕಾಶ ಸಿಗದೆ ಮುನಿಸಿಕೊಂಡಿರುವ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಸದನದಿಂದ ಹೊರಗೆ ಉಳಿಯಲು ತೀರ್ಮಾನಿಸಿದ್ದಾರೆ

ಬೆಳಗಾವಿಗೆ ಹೋಗ್ತೀನಿ ಅಧಿವೇಶನಕ್ಕೆ ಹೋಗಲ್ಲ: ಈಶ್ವರಪ್ಪ ಮುನಿಸಿಗೆ ಕಾರಣ ಏನು..?

ಬಾಗಲಕೋಟೆ:
ಬೆಳಗಾವಿಗೆ ಹೋಗ್ತೀನಿ ಆದರೆ ಅಧಿವೇಶನಕ್ಕೆ ಹೋಗಲ್ಲ. ಸಭಾಧ್ಯಕ್ಷರಿಗೆ ಈ ವಾರ ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಲು ತೆರಳುತ್ತಿದ್ದೇನೆ. ಅಪರಾಧದಿಂದ ಮುಕ್ತರಾದವರಿಗೆ ಶಿಕ್ಷೆ ಆಗೋದಿಲ್ಲ ಎಂದಿದ್ದರು. ಆದರೆ  ಕ್ಲೀನ್ ಚಿಟ್ ಸಿಕ್ಕರೂ ನನಗೆ ಸಂಪುಟದಲ್ಲಿ ಅವಕಾಶ ಸಿಗ್ತಿಲ್ಲ. ಅದು ಯಾಕೆ ಅಂತ ನನಗೂ ತಿಳಿದಿಲ್ಲ..!

ಇದಿಷ್ಟು ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾತುಗಳು.

ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೊಮ್ಮಾಯಿ ಅವರು ನನ್ನ ಅವಶಕ್ಯತೆ ಸಂಪುಟಕ್ಕೆ ಇದೆ. ಮಂತ್ರಿ ಮಾಡ್ತೀನಿ ಅಂತಾ ತಿಳಿಸ್ತಾನೆ ಬಂದಿದ್ದಾರೆ. ಜನರೂ ಕರೆ ಮಾಡುತ್ತಿದ್ದಾರೆ. ಹೀಗಾಗಿ ನೋವಾಗಿದೆ ಎಂದು ಬೇಸರ ಹೊರಹಾಕಿದರು.

ನನಗೆ ಅಪಮಾನವಾಗುತ್ತಿದೆ.ಇದನ್ನು ಅರ್ಥ ಮಾಡಿಸುವ ಉದ್ದೇಶದಿಂದಲೇ ಸೌಜನ್ಯದ ಪ್ರತಿಭಟನೆಗೆ ಮುಂದಾಗುತ್ತಿರುವುದಾಗಿ ತಿಳಿಸಿದರು. ಜನಾರ್ಧನ ರೆಡ್ಡಿ ಪಕ್ಷ ಕಟ್ಟುವ ವಿಚಾರ ನನಗೆ ತಿಳಿದಿಲ್ಲ. ಅವರು ನನಗೆ ಕೇಳಿದರೆ ಬೇಡ ಎನ್ನುತ್ತೇನೆ. ಬಿಜೆಪಿ ನಮಗೆ ತಾಯಿಯಿದ್ದಂತೆ ಹಿಂದೆ ಯಡಿಯೂರಪ್ಪ ಅವರಿಗೆ ಗಿಣಿ ಹೇಳಿದ ಹಾಗೆ ಹೇಳಿದರೂ ಕೇಳಲಿಲ್ಲ ಎಂದು ವಿವರಿಸಿದರು.