625ಕ್ಕೆ 624 ಅಂಕ ಪಡೆದ 10 ವಿದ್ಯಾರ್ಥಿಗಳು : ಟಿ.ಭೂಬಾಲನ್
ಎಸ್‍ಎಸ್‍ಎಲ್‍ಸಿ ಫಲಿತಾಂಶ | ಜಿಲ್ಲೆಯಲ್ಲಿ ಶೇ.84.71 ರಷ್ಟು ತೇರ್ಗಡೆ*
ನಾಡನುಡಿ ನ್ಯೂಸ್
ಬಾಗಲಕೋಟೆ:.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಶೇ.84.71 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 10 ಜನ ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆದಿರುತ್ತಾರೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 30575 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 25900 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಅದರಲ್ಲಿ ಬಾಲಕರು 12229, ಬಾಲಕಿಯರು 13671 ತೇರ್ಗಡೆ ಹೊಂದುವ ಮೂಲಕ ಒಟ್ಟಾರೆಯಾಗಿ ಶೇ.84.71 ರಷ್ಟು ಫಲತಾಂಶ ಲಭಿಸಲಿದೆ. ಈ ಬಾರಿಯು ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ. ಶಾಲಾ ಪುನರಾವರ್ತಿತ 265 ಪೈಕಿ 85 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಎ ಶ್ರೇಣಿ ಲಭಿಸಿದೆ.
(ಟಿ.ಭೂಬಾಲನ್)
ಬಾದಾಮಿ ತಾಲೂಕಿನಲ್ಲಿ 5107 ಪೈಕಿ 4692 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ಬಾಗಲಕೋಟೆ ತಾಲೂಕಿನಲ್ಲಿ 4738 ಪೈಕಿ 4209, ಬೀಳಗಿ ತಾಲೂಕಿನಲ್ಲಿ 2769 ಪೈಕಿ 2501, ಹುನಗುಂದ ತಾಲೂಕಿನಲ್ಲಿ 4913 ಪೈಕಿ 4578, ಜಮಖಂಡಿ ತಾಲೂಕಿನಲ್ಲಿ 7820 ಪೈಕಿ 5842, ಮುಧೋಳ ತಾಲೂಕಿನಲ್ಲಿ 5228 ಪೈಕಿ 4078 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಸದರಿ ಪರೀಕ್ಷೆಯಲ್ಲಿ 1288 ಖಾಸಗಿ ಹೊಸ ಅಭ್ಯರ್ಥಿಗಳ ಪರೀಕ್ಷೆ ಬರೆದಿದ್ದು, ಈ ಪೈಕಿ 157 ಜನ ತೇರ್ಗಡೆ ಹೊಂದಿದ್ದರೆ, ಖಾಸಗಿ ಪುನರಾವರ್ತಿತ 25 ವಿದ್ಯಾರ್ಥಿಗಳ ಪೈಕಿ 3 ಜನ ತೇರ್ಗಡೆ ಹೊಂದಿರುತ್ತಾರೆ.
(ಶ್ರವಣ ನರೇಗಲ್)
625ಕ್ಕೆ 624 ಅಂಕ ಪಡೆದ ವಿದ್ಯಾರ್ಥಿಗಳು
ಪ್ರಸಕ್ತ 2022ನೇ ಸಾಲಿನ ಎಸ್.ಎಸ್.ಎಲ್.ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯ 10 ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆದುಕೊಂಡಿದ್ದಾರೆ. ಜಮಖಂಡಿಯ ತುಂಗಳ ಇಂಗ್ಲೀಷ ಮೆಡಿಯಮ್ ಹೈಸ್ಕೂಲಿನ ವಿದ್ಯಾರ್ಥಿ ಸನ್ಮಿತಾ ಚಲವಾದಿ, ರಾಮಪೂರದ ಪೂರ್ಣಪ್ರಜ್ಞಾ ಇಂಗ್ಲೀಷ ಹೈಸ್ಕೂಲಿನ ಸೌಮ್ಯ ಅಮ್ಮಲಜರಿ, ಮುಧೋಳನ ಕೆ.ಆರ್.ಲಕ್ಕಮ್ಮ ಪ್ರೌಢಶಾಲೆಯ ಸಂಪ್ರೀತಾ ಬಿಸಲಾಳಕೊಪ್ಪ, ಇಲಕಲ್ಲಿನ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಪ್ರೀತಿ ಕಾಟವಾ, ಎಸಿಓ ಇಂಗ್ಲೀಷ ಮೆಡಿಯಂ ಹೈಸ್ಕೂಲಿನ ಸುಷ್ಮಿತಾ ಕೋಟಿ, ಮುಧೋಳಿನ ರೋಟರಿ ಇಂಗ್ಲೀಷ ಮೆಡಿಯಂ ಹೈಸ್ಕೂಲಿನ ಕಿರಣಕುಮಾರ ಬೆಳಗಲಿ, ತೊದಲಬಾಗಿಯ ಕಿತ್ತೂರ ರಾಣಿ ಚನ್ನಮ್ಮ ರೆಸಿಡೆನ್ಸಿ ಸ್ಕೂಲನ ನಿಸರ್ಗ ಕೋಷ್ಟಿ, ಜಮಖಂಡಿಯ ಸಾಯಿ ಸಂಕಲ್ಪ ಇಂಗ್ಲೀಷ ಮಿಡಿಯಂ ಹೈಸ್ಕೂಲಿನ ರೇನುಶ್ರೀ ಬಡಚಿ, ತುಂಗಳ ಇಂಗ್ಲೀಷ ಮಿಡಿಯಂ ಹೈಸ್ಕೂಲಿನ ಅಮೃತ ಪಾಟೀಲ, ಬಾಗಲಕೋಟೆಯ ಸೆಂಟ್ ಆನ್ಸ್ ಕಾನ್ವೆಂಟ್ ಹೈಸ್ಕೂಲಿನ ಶ್ರವಣ ನರೇಗಲ್ಲ 624 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಸಚಿವ ಕಾರಜೋಳ ಅಭಿನಂದನೆ
ಜಿಲ್ಲೆಯ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿ ಶೇ.84.71 ರಷ್ಟು ಫಲಿತಾಂಶ ದಾಖಲಿಸಿದ್ದು, ನನಗೆ ವ್ಯಯಕ್ತಿಕವಾಗಿ ಅತ್ಯಂತ ಸಂತೋಷ ತಂದಿದೆ. ಪ್ರತಿಭಾವಂತ ಮಕ್ಕಳನ್ನು ಕೊಡುಗೆ ನೀಡಿದ ಪಾಲಕರಿಗೂ ಇಷ್ಟು ಉತ್ತಮ ಸಾಧನೆ ಮಾಡಲು ಕಾರಣಿಕರ್ತರಾದ ವಿದ್ಯಾರ್ಥಿಗಳಿಗೆ, ಬೋಧಿಸಿದ ಶಿಕ್ಷಕ ವೃಂದಕ್ಕೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿನಂಧನೆ ಸಲ್ಲಿಸಿದ್ದಾರೆ