ಮೀಸಲಾತಿ ಹೋರಾಟ: ಈಗ ಗಾಣಿಗ ಸಮುದಾಯದ ಸರದಿ

ಹಿಂದುಳಿದ‌ ವರ್ಗವಾಗಿರುವ ಗಾಣಿಗ ಸಮುದಾಯಕ್ಕೆ‌ ಪರಿಶಿಷ್ಟ ಪಂಗಡದ ಮೀಸಲಾತಿ ದೊರೆಯದಿದ್ದರೆ ಹೋರಾಟ ಅನಿವಾರ್ಯದ ಎಂದು ಸಮುದಾಯದ‌ ಸ್ವಾಮೀಜಿ ಎಚ್ಚರಿಕೆ‌ ನೀಡಿದ್ದಾರೆ

ಮೀಸಲಾತಿ ಹೋರಾಟ: ಈಗ ಗಾಣಿಗ ಸಮುದಾಯದ ಸರದಿ

ನಾಡನುಡಿ ನ್ಯೂಸ್
ಬಾಗಲಕೋಟೆ:

ಮೀಸಲಾತಿಗೆ ಒತ್ತಾಯಿಸಿ ರಾಜ್ಯದಲ್ಲಿ ಹಲವು ಸಮುದಾಯಗಳು ಪಾದಯಾತ್ರೆ ಆರಂಭಿಸಿರುವುದರ ಬೆನ್ನಲೇ ಇದೀಗ ಗಾಣಿಗ ಸಮುದಾಯ ಕೂಡ ಎಸ್ ಟಿ‌ ಮೀಸಲಾತಿಯ ಬೇಡಿಕೆ‌ ಮುಂದಿಟ್ಟಿದೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಸಿಎಂಗಳಾದ  ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಬಜೆಟ್ ನಲ್ಲಿ ಸಮುದಾಯದ ಬೇಡಿಕೆಗಳು ಈಡೇರುವ ನಿರೀಕ್ಷೆ ಇದೆ. ಅದು ಸಾಧ್ಯವಾಗದಿದ್ದರೆ ಸರ್ಕಾರವನ್ನು ಕಣ್ತೆರೆಸುವ ರೀತಿ ಹೋರಾಟ ನಡೆಸಲಾಗುವುದು ಎಂದು ಗಾಣಿಗ ಸಮುದಾಯದ ಕೋಲಾರ ಶ್ರೀ ದಿಗಂಬರೇಶ್ವರ ಮಠದ ಯೋಗಿ ಕಲ್ಲಿನಾಥ ಸ್ವಾಮೀಜಿ ತಿಳಿಸಿದ್ದಾರೆ.

ಗಾಣಿಗ ಸಮುದಾಯ ಹಿಂದುಳಿದ ವರ್ಗವಾಗಿದ್ದು, ಸಮಾಜದಲ್ಲಿ ಕಡುಬಡುವರು ಹೆಚ್ಚಿನ‌ ಸಂಖ್ಯೆಯಲ್ಲಿದ್ದಾರೆ.ಹೀಗಾಗಿ ಸಮುದಾಯಕ್ಕೆ ಮೀಸಲಾತಿ ಅಗತ್ಯವಿದೆ ಎಂದು ಹೇಳಿದರು.

ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಜತೆಗೆ, ಸಮುದಾಯದ ಅಭಿವೃದ್ಧಿ ನಿಗನ ಸ್ಥಾಪಿಸಿ ೧ ಸಾವಿರ ಕೋಟಿ ರೂ.ಗಳ ಅನುದಾನ‌ ಮೀಸಲಿಡಬೇಕು. ಬಜೆಟ್ ನಲ್ಲಿ ಈ ಎಲ್ಲ ಬೇಡಿಕೆಗಳು ಈಡೇರುವ ಭರವಸೆ ಇದೆ.‌ಅದು ಸಾಧ್ಯವಾಗದಿದ್ದಲ್ಲಿ ವಿಧಾನಸೌಧಕ್ಕೆ‌ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ‌ ನೀಡಿದರು.

ಬೀಳಗಿ ಎಪಿಎಂಸಿ‌ ಮಾಜಿ ಅಧ್ಯಕ್ಷ ರಾಮಣ್ಣ ಕಾಳಪ್ಪಗೋಳ, ಮಲ್ಲೇಶ ಜಾಲಿ ಉಪಸ್ಥಿತರಿದ್ದರು.