ಮಧ್ಯಪ್ರದೇಶದಿಂದ ಮರಳಿ ಗೂಡು ಸೇರಿದ ತಾಯವ್ವ

ಮಧ್ಯಪ್ರದೇಶದಿಂದ ಮರಳಿ ಗೂಡು ಸೇರಿದ ತಾಯವ್ವ

ಬಾಗಲಕೋಟೆ ಡಿ.೨೪ :ಕಬ್ಬು ಕಡಿಯಲು ಬಂದ ಗ್ಯಾಂಗ್ ಜೊತೆ ಮಹಾರಾಷ್ಟçಕ್ಕೆ ಹೋಗಿ ನಾಪತ್ತೆಯಾದ ಮಹಿಳೆ ಮಧ್ಯಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಸಖಿ ಒನ್ ಸ್ಟಾಪ್ ಕೇಂದ್ರದ ಸಿಬ್ಬಂದಿಗಳ ಕಾರ್ಯದಿಂದ ಮಹಿಳೆ ಮರಳಿ ಗೂಡಿಗೆ ಸೇರುವಂತಾಗಿದೆ.
 ಜಿಲ್ಲೆಯ ಮುಧೋಳ ತಾಲೂಕಿನ ಚಿತ್ರಬಾನಕೋಟೆ ಗ್ರಾಮದ  ತಾಯವ್ವ ಗಂಡ ಸುರೇಶ್ ಅರಬೆಂಚಿ ವಯಸ್ಸು ಅಂದಾಜು ೫೦ ಸಂತ್ರಸ್ತೆ ಮಹಿಳೆ ಮಧ್ಯಪ್ರದೇಶದ ರಿವಾ ಜಿಲ್ಲೆಯಲ್ಲಿ ಪೊಲೀಸರು ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಸಿಬ್ಬಂದಿ ರಕ್ಷಣೆ ಮಾಡಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದ್ದರು. ತಾಯವ್ವ ಅರಬೆಂಚಿ ಎನ್ನುವ ಸಂತ್ರಸ್ತೆ ಮೂಲತಃ ಬಾಗಲಕೋಟೆ ಜಿಲ್ಲೆಯವರು ಎಂದು ಪತ್ತೆ ಹಚ್ಚಿದ ಅಲ್ಲಿನ ಸಖಿ ಕೇಂದ್ರದ ಸಿಬ್ಬಂದಿ ಬಾಗಲಕೋಟೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಖಿ ಕೇಂದ್ರದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. 
ಸದರಿ ಮಹಿಳೆಯನ್ನು ರಕ್ಷಣೆ ಮಾಡಿ ಬಾಗಲಕೋಟೆ ಜಿಲ್ಲೆಗೆ ಪೊಲೀಸರು ಹಾಗೂ ಸಖಿ ಕೇಂದ್ರದ ಸಿಬ್ಬಂದಿ ಕರೆದುಕೊಂಡು ಬಂದಿದ್ದು. ಸಂತ್ರಸ್ತೆ ಮಹಿಳೆಯನ್ನು  ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತೆ ತಾಯವ್ವ ಅರಬೆಂಚಿ ಹೇಗೆ ಮಧ್ಯಪ್ರದೇಶಕ್ಕೆ ಹೋದರು, ಪ್ರಕರಣದ ಹಿನ್ನೆಲೆ ಬಗ್ಗೆ ಹೇಳಬೇಕಾದರೆ, ಅಕ್ಟೋಬರ ೩೦ ರಂದು ಮಧ್ಯಪ್ರದೇಶ ರಿವಾ ಜಿಲ್ಲೆಯ ಸಖಿ ಕೇಂದ್ರದ ಸಿಬ್ಬಂದಿ ಬಾಗಲಕೋಟೆ ಜಿಲ್ಲೆಯ ಸಖಿ ಕೇಂದ್ರಕ್ಕೆ ದೂರವಾಣಿ ಕರೆ ಮೂಲಕ ತಾಯವ್ವ ಅರಬೆಂಚಿ ಎನ್ನುವ ಮಹಿಳೆ ನಮ್ಮ ಜಿಲ್ಲೆಯ ಸಖಿ ಕೇಂದ್ರದಲ್ಲಿ ರಕ್ಷಣೆ ಪಡೆದಿದ್ದಾರೆ. ಅವರ ಪೋಷಕರನ್ನು ಪತ್ತೆ ಹಚ್ಚಿ, ವಾಪಸ್ ಕರೆದುಕೊಂಡು ಹೋಗುವ ವಿಚಾರವಾಗಿ ಮಾಹಿತಿ ನೀಡಿದ್ದರು. 
ಅವರ ಮಾಹಿತಿ ಮೇರೆಗೆ ಮುಧೋಳ ತಾಲೂಕಿನ ಲೋಕಾಪುರ ಪೊಲೀಸ್ ಠಾಣೆಯವರಿಗೆ ಮಾಹಿತಿ ನೀಡಿ, ಠಾಣಾ ವ್ಯಾಪ್ತಿಯ ಚಿತ್ರಬಾನಕೋಟೆಯ ಸಂತ್ರಸ್ತೆ ತಾಯವ್ವ ಅರಬೆಂಚಿ ಪೋಷಕರನ್ನು ಸಂಪರ್ಕಿಸಿ ರಕ್ಷಣೆಯಾದ ಬಗ್ಗೆ ಮಾಹಿತಿ ನೀಡಲಾಗಿತ್ತು. ಬಳಿಕ ಸಂತ್ರಸ್ತೆ ಮಹಿಳೆಯನ್ನು ವಾಪಸ್ ಕರೆತರುವ ವಿಚಾರವಾಗಿ ಸಖಿ ಕೇಂದ್ರದ ಸಿಬ್ಬಂದಿ ಪೊಲೀಸರೊಂದಿಗೆ ಸತತ ಪ್ರಯತ್ನ  ಮಾಡಿದ್ದಾರೆ.
 ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾರ್ಗದರ್ಶನದಂತೆ ಲೋಕಾಪುರ ಪೊಲೀಸ್ ಠಾಣೆಯ ಓರ್ವ ಮಹಿಳಾ ಪೊಲೀಸ್ ಪೇದೆ, ಹಾಗೂ ಓರ್ವ ಪುರುಷ ಪೇದೆ ಹಾಗೂ ಸಖಿ ಕೇಂದ್ರದ ಆಪ್ತ ಸಮಾಲೋಚಕರು ಸೇರಿ ಡಿಸೆಂಬರ ೧೪ ರಂದು ಬಾಗಲಕೋಟೆಯಿಂದ ರೈಲ್ವೆ ಮೂಲಕ ಮುಂಬೈಗೆ ತೆರಳಿ, ಮುಂಬೈಯಿAದ ರಿವಾ ಜಿಲ್ಲೆಗೆ ಡಿಸೆಂಬರ ೧೬ ರಂದು ಸಂಜೆ ೩-೪೫ಕ್ಕೆ ತಲುಪಿ. ಬಳಿಕ  ರಿವಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಪೊಲೀಸರು ಹಾಗೂ ಸಖಿ ಕೇಂದ್ರದವರೊAದಿಗೆ ತಾಯವ್ವ ಅರಬೆಂಚಿ ಸಂತ್ರಸ್ತೆ ಮಹಿಳೆ ಬಗ್ಗೆ ಮಾಹಿತಿ ಪಡೆಯಲಾಯಿತು.
ಬಳಿಕ ಸಂತ್ರಸ್ತೆ ತಾಯವ್ವ ಅರಬೆಂಚಿ ಮಹಿಳೆಯನ್ನು ಆಪ್ತ ಸಮಾಲೋಚನೆ ಮಾಡಿ, ಸಂತ್ರಸ್ತೆ ಮಹಿಳೆ ಆರೋಗ್ಯ ಹಾಗೂ ಆಕೆಗೆ ಒದಗಿಸಿರುವ ಸೌಲಭ್ಯದ ವಿವರ ಪಡೆದುಕೊಳ್ಳಲಾಯಿತು. ಸಂತ್ರಸ್ತೆ ಮಹಿಳೆ ಲೋಕಾಪುರ ಬಳಿಯ ಚಿತ್ರಬಾನಕೋಟೆ ಗ್ರಾಮದಿಂದ ಕಬ್ಬು ಕಟಾವು ಮಾಡುವ ಗ್ಯಾಂಗ್ ಮೂಲಕ ಮಹಾರಾಷ್ಟç ರಾಜ್ಯಕ್ಕೆ ಹೋಗಿದ್ದು, ಅಲ್ಲಿಂದ ರಿವಾ ಜಿಲ್ಲೆಗೆ ರೈಲ್ವೆ ಮೂಲಕ ತೆರಳಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಸೆಪ್ಟೆಂಬರ ೨೩ ರಂದು ರಿವಾ ಜಿಲ್ಲೆಯ ಮಾಂಗ್ ಗಂಜ್ ಗ್ರಾಮದ ರಸ್ತೆಯಲ್ಲಿ ಓಡಾಡುತ್ತಿದ್ದ ಸಂತ್ರಸ್ತೆ ಮಹಿಳೆಯನ್ನು ಪೊಲೀಸರು ಸಖಿ ಕೇಂದ್ರಕ್ಕೆ ತಂದು ಬಿಟ್ಟಿದ್ದಾರೆ. 
ಬಳಿಕ ಸಂತ್ರಸ್ತೆ ಮಹಿಳೆಯ ಭಾಷೆ ಅರ್ಥವಾಗದಿದ್ದಾಗ ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಸಖಿ ಕೇಂದ್ರದ ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿದ್ದಾರೆ.  ಸಂತ್ರಸ್ತೆ ಮಾತಾಡುವ ಚಿಕ್ಕಮ್ಮ, ನಾಯಿ ಎನ್ನುವ ಪದ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಬಳಿಕ ಆಂಧ್ರಪ್ರದೇಶದ ಸಖಿ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಸಂತ್ರಸ್ತೆ ಮಹಿಳೆ ಕರ್ನಾಟಕ ರಾಜ್ಯದವಳು ಎನ್ನುವುದು ಗೊತ್ತಾಗಿದೆ. ಸಂತ್ರಸ್ತೆ ಹೇಳುವ ಊರು ಹೆಸರು ಆಧರಿಸಿ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಗೂಗಲ್ ನಲ್ಲಿ ಸರ್ಚ್ ಮಾಡಿ ಬಾಗಲಕೋಟೆ ಜಿಲ್ಲೆಯ ಸಖಿ ಕೇಂದ್ರಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. 
ಬಳಿಕ ಸಖಿ ಕೇಂದ್ರದ ಸಿಬ್ಬಂದಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಸಂತ್ರಸ್ತೆ ಮಹಿಳೆಯನ್ನು ಮಧ್ಯಪ್ರದೇಶ ರಿವಾ ಜಿಲ್ಲೆಯ ಸಖಿ ಕೇಂದ್ರದಲ್ಲಿ ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲಿ ಡಿಸೆಂಬರ ೨೧ ರಂದು ಹಸ್ತಾಂತರಿಸಿದ್ದು, ಅಂದು ರಿವಾ ಜಿಲ್ಲೆಯಿಂದ ರೈಲ್ವೆ ಮೂಲಕ ಸಂತ್ರಸ್ತೆ ಮಹಿಳೆಯನ್ನು ಬಾಗಲಕೋಟೆ ಜಿಲ್ಲೆಗೆ ಡಿಸೆಮಬರ ೨೩ ರಂದು ಕರೆದುಕೊಂಡು ಬರಲಾಗಿದೆ. ಪೊಲೀಸರು ಹಾಗೂ ಸಖಿ ಕೇಂದ್ರದ ಸಿಬ್ಬಂದಿ ಸತತ ಪ್ರಯತ್ನದಿಂದಾಗಿ ಸಂತ್ರಸ್ತೆ ಮಹಿಳೆ ಕುಟುಂಬಸ್ಥರ ಮಡಿಲಿಗೆ ಸೇರಿದ್ದಾರೆ.