ಸ್ನಿನ್ನಿಂಗ್ ಮಿಲ್ ಆಗಲಿದೆ ೧ ಸಾವಿರ ಹಾಸಿಗೆಯ ಕೋವಿಡ್ ಕೇರ್ ಸೆಂಟರ್ 

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗದ್ದನಕೇರಿ ಕ್ರಾಸ್‌ಬಳಿಯ ಬವಿವ ಸಂಘಕ್ಕೆ ಸೇರಿರುವ ಸ್ಪಿನ್ನಿಂಗ್ ಮಿಲ್ ಆವರಣದಲ್ಲಿ ಒಂದು ಸಾವಿರ ಹಾಸಿಗೆಯ ಕೋವಿಡ್ ಕೇರ್ ಸೆಂಟರ್‌ನ್ನು ಆರಂಭಿಸಲಾಗುತ್ತಿದೆ

     ಸ್ನಿನ್ನಿಂಗ್ ಮಿಲ್ ಆಗಲಿದೆ ೧ ಸಾವಿರ ಹಾಸಿಗೆಯ ಕೋವಿಡ್ ಕೇರ್ ಸೆಂಟರ್ 


     

ನಾಡನುಡಿ ನ್ಯೂಸ್
ಬಾಗಲಕೋಟೆ ಜು.೨೦: 
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗದ್ದನಕೇರಿ ಕ್ರಾಸ್‌ಬಳಿಯ ಬವಿವ ಸಂಘಕ್ಕೆ ಸೇರಿರುವ ಸ್ಪಿನ್ನಿಂಗ್ ಮಿಲ್ ಆವರಣದಲ್ಲಿ ಒಂದು ಸಾವಿರ ಹಾಸಿಗೆಯ ಕೋವಿಡ್ ಕೇರ್ ಸೆಂಟರ್‌ನ್ನು ಆರಂಭಿಸಲಾಗುತ್ತಿದೆ. ಅದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ತಿಳಿಸಿದ್ದಾರೆ. 
  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೧೧೦೦ ಹಾಸಿಗೆಯ ಹಾನಗಲ್ ಶ್ರೀಕುಮಾರೇಶ್ವರ ಆಸ್ಪತ್ರೆಯನ್ನೇ ಕೋವಿಡ್ ಚಿಕಿತ್ಸೆಗೆ ನೀಡಲು ತೀರ್ಮಾನಿಸಲಾಗಿತ್ತು. ಆದರೆ ವಿಶ್ವವಿದ್ಯಾಲಯದ ಪರೀಕ್ಷೆಗಳು ಆರಂಭಗೊAಡಿರುವ ಹಿನ್ನೆಲೆಯಲ್ಲಿ ಸ್ಪಿನ್ನಿಂಗ್ ಮಿಲ್ ಆವರಣದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
 ಎಚ್‌ಎಸ್‌ಕೆ ಆಸ್ಪತ್ರೆಯನ್ನು ಚಿಕಿತ್ಸೆಗೆ ಒದಗಿಸುತ್ತೇವೆ. ಅಷ್ಟರಲ್ಲಿ ಪ್ರಕರಣಗಳು ಹೆಚ್ಚಾದರೆ ಮುಂಜಾಗೃತವಾಗಿರಲಿ ಎಂಬ ಕಾರಣಕ್ಕೆ ಸ್ಪಿನ್ನಿಂಗ್ ಮಿಲ್ ಆವರಣವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 
 ಈಗಾಗಲೇ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹಾಗೂ ಎಸ್‌ಪಿ ಲೋಕೇಶ ಜಗಲಾಸರ್ ಅವರೊಂದಿಗೆ ಚರ್ಚಿಸಲಾಗಿದೆ. ಈಗಲೇ ಪ್ರಕರಣಗಳು ಹೆಚ್ಚಳಗೊಂಡಲ್ಲಿ ಇರಲಿ ಎಂಬ ಕಾರಣಕ್ಕಾಗಿ ಸ್ಪಿನ್ನಿಂಗ್ ಮಿಲ್‌ನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 
 


 ಶ್ರಾವಣದಲ್ಲೂ ಇಲ್ಲ ಸಭೆ ಸಮಾರಂಭ:ಶ್ರಾವಣ ಮಾಸ ಆರಂಭಗೊAಡಿದ್ದು, ಕೋವಿಡ್ ವಿಷಮ ಸಂದರ್ಭದಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಪ್ರವಚನ, ಸಭೆ ಸಮಾರಂಭಗಳಿಗೂ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಲಾಕ್‌ಡೌನ್, ಸೀಲ್‌ಡೌನ್ ಮಾಡಿದರೆ ಪ್ರಯೋಜನವಿಲ್ಲ ಅದರ ಬಗ್ಗೆ ಸಿಎಂ ಯಡಿಯೂರಪ್ಪ ಅವರೂ ಸಹ ಆಸಕ್ತಿ ಹೊಂದಿಲ್ಲ. ಕೊರೊನಾದ ನಡುವೆಯೇ ನಾವು ಬದುಕಬೇಕಿದ್ದು, ಜೀವ ಹಾಗೂ ಜೀವನ ಎರಡೂ ಮುಖ್ಯ ಹೀಗಾಗಿ ಗುಂಪು ಸೇರದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಬದುಕುವುದನ್ನು ರೂಢಿಸಿಕೊಳ್ಳಬೇಕೆಂದು ಮನವಿ ಮಾಡಿದರು. 
 ಚಿಕ್ಕಮ್ಯಾಗೇರಿಯಲ್ಲಿ ನಡೆದ ಒಂದಯ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡ ಬಹುತೇಕ ಜನರಲ್ಲಿ ಸೋಂಕು ಕಾಣಿಸಿಕೊಂಡಿತು. ಬಾಗಲಕೋಟೆಯಲ್ಲಿ ನಡೆದ ಕಲಾದಗಿ ಮೂಲದ ಯುವಕನ ಮದುವೆಯಿಂದಾಗಿಯೂ ನೂರಾರು ಜನರಲ್ಲಿ ಸೋಂಕು ಕಾಣಿಸಿಕೊಂಡಿತು.ಇAಥದಕ್ಕೆ ಸಾರ್ವಜನಿಕರು ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು. 
 ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿ ಮದುವೆ ಮಾಡಿಕೊಳ್ಳಬೇಕು. ಇಲ್ಲ ಕೊರೊನಾ ಸ್ಥಿತಿ ಕೊನೆಗೊಳ್ಳುವವರೆಗೆ ಮುಂದಕ್ಕೆ ಹಾಕಬೇಕು. ತುರ್ತು ಇದ್ದರೆ ರೆಜಿಸ್ಟಾçರ್ ಕಚೇರಿಗೆ ತೆರಳಿ ಮದುವೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.