ಬಾಗಲಕೋಟೆ ಉಸ್ತುವಾರಿ ಮಂತ್ರಿ ಚಿತ್ರದುರ್ಗದಲ್ಲಷ್ಟೇ ಲಭ್ಯ:INC Bagalkot

ಜಿಲ್ಲಾ ಕಾಂಗ್ರೆಸ್ ನ ಅಧಿಕೃತ ಪುಟ ಎಂದು ಹೇಳಿಕೊಂಡಿರುವ INC Bagalkot ಪೇಜ್ ನಲ್ಲಿ ಸಚಿವ ತಿಮ್ಮಾಪುರ ಅವರನ್ನು ಟೀಕಿಸಿ ಪೋಸ್ಟ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ

ಬಾಗಲಕೋಟೆ ಉಸ್ತುವಾರಿ ಮಂತ್ರಿ ಚಿತ್ರದುರ್ಗದಲ್ಲಷ್ಟೇ ಲಭ್ಯ:INC Bagalkot

ಬಾಗಲಕೋಟೆ:ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ  ಜಿಲ್ಲಾ ಕಾಂಗ್ರೆಸ್ ಅಧಿಕೃತ ಪುಟದಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ.

INC bagalkot ಹೆಸರಿನಲ್ಲಿರುವ ಪುಟ ಜಿಲ್ಲಾ ಕಾಂಗ್ರೆಸ್ ನ ಅಧಿಕೃತ ಪೇಜ್ ಎಂದು ಘೋಷಿಸಿಕೊಂಡಿದ್ದು, ಉಸ್ತುವಾರಿ‌ ಮಂತ್ರಿಗಳನ್ನು ಭೆಟ್ಟಿ ಮಾಡಬೇಕಾದರೆ ನೀವು ಚಿತ್ರದುರ್ಗಕ್ಕೆ ತೆರಳಬೇಕು, ಚಿತ್ರದುರ್ಗದವರ ಕೆಲಸಗಳು ಮಾತ್ರ ಸರಾಗವಾಗಿ ನಡೆಯುತ್ತಿವೆ ಎಂದು ಹಿಗ್ಗಾಮುಗ್ಗಾ ಟೀಕೆ ಮಾಡಲಾಗಿದೆ.

ಸಚಿವರ ಪರವಾಗಿ ಕೆಲ ಕಾರ್ಯಕರ್ತರು ಬ್ಯಾಟಿಂಗ್ ಮಾಡಲು ಮುಂದೆ ಬಂದಾಗಲೂ ಸಹ ಇವರನ್ನ ನಂಬಿ ಕೆಲಸ ಮಾಡಿದ ಕಾರ್ಯಕರ್ತರ ಕಥೆ ಏನು ಎಂದು ಆ ಪೇಜ್ ಮೂಲಕ ಪ್ರಶ್ನೆ ಮಾಡಲಾಗಿದೆ.

ಅವರ ಮಗನಿಗೆ ಕರೆ‌ಮಾಡಿದರೆ ಚಿತ್ರದುರ್ಗದಲ್ಲಿ ಇದ್ದೇನೆ ಎನ್ನುತ್ತಾರೆ ಕ್ಷೇತ್ರದ ಕೆಲಸಗಳಿಗಾಗಿ ಚಿತ್ರದುರ್ಗಕ್ಕೆ ತೆರಳಬೇಕೆ ಎಂದು ಪ್ರಶ್ನಿಸಲಾಗಿದೆ.

INC bagalkot ಪುಟವನ್ನು ೨೦೨೦ರಲ್ಲೇ ತೆರೆಲಾಗಿದ್ದು,  ಕಾಂಗ್ರೆಸ್ ಪಕ್ಷದ ನಿಲುವು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರ ಪ್ರವಾಸ, ಪಕ್ಷದ ಪರವಾಗಿ ನಿರಂತರ ಪೋಸ್ಟ್ ಮಾಡಲಾಗುತ್ತ ಬರಲಾಗಿದೆ.

೫೩೦೦ಜನ ಈ ಪುಟಕ್ಕೆ ಫಾಲೋವರ್ಸ್ ಗಳಿದ್ದು, ಇದು ಪಕ್ಷದ ಅಧಿಕೃತ ಪುಟವೇ ಅಥವಾ ಯಾರೋ ವ್ಯಕ್ತಿ ಇದ‌ನ್ನು ಬಳಸಿಕೊಳ್ಳುತ್ತಿದ್ದಾರೆಯೇ ಎಂಬುದನ್ನು‌ ಪಕ್ಷವೇ ಸ್ಪಷ್ಟಪಡಿಸಬೇಕು