ಟ್ಯ್ರಾಕ್ಟರಗೆ ಕಾರು ಢಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

ಟ್ಯ್ರಾಕ್ಟರಗೆ ಕಾರು ಢಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

ಬಾಗಲಕೋಟೆ: ನಿಂತಿದ್ದ ಕಬ್ಬು ತುಂಬಿದ‌ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಜಿಲ್ಲೆ ತುಂಬರಮಟ್ಟಿ ಕ್ರಾಸ್ ಬಳಿ‌ ಜರುಗಿದೆ.

ಹುಬ್ಬಳ್ಳಿ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ೨೧೮ರಲ್ಲಿ ಘಟನೆ ಸಂಭವಿಸಿದೆ ಮೃತಪಟ್ಟವರು  ವಿಜಯಪುರ ಜಿಲ್ಲೆಯ ಅವರು ಎಂದು ತಿಳಿದೆ. ಮೃತಪಟ್ಟವರಲ್ಲಿ ಓರ್ವನ ಹೆಸರು ಮಲ್ಲು ಪೂಜಾರಿ ಎಂದು ತಿಳಿದು ಬಂದಿದೆ. 

ಬೀಳಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.