ಸುಲಭವಾಗಿ ಸಿದ್ಧಪಡಿಸಿ ಘಮಘಮಿಸುವ ಈ ಆಹಾರ

ನಾಡನುಡಿ ದೀಪಾವಳಿ ಪಾಕ ಶಾಲೆಯ ನಾಲ್ಕನೇ ಭಾಗ ಇಲ್ಲಿದೆ.

ಸುಲಭವಾಗಿ ಸಿದ್ಧಪಡಿಸಿ ಘಮಘಮಿಸುವ ಈ ಆಹಾರ

ಬ್ರೆಡ್ ರಸ್ಮಲಾಯಿ
ಸಾಮಗ್ರಿ: 
ಬಾದಾಮಿ ಪುಡಿಗಾಗಿ :  ಬಾದಾಮಿ ಒಂದು ಕಪ್ (3ನಿಮಿಷ ಹುರಿದು ತಣಿಸಿರುವುದು)ಸಕ್ಕರೆ ಒಂದು ಕಪ್, ಮಿಲ್ಕ್ ಪೌಡರ್ ಒಂದು ಕಪ್. ಸಣ್ಣಗೆ ಕತ್ತರಿಸಿದ ಬಾದಾಮಿ ಪಿಸ್ತಾ, 
3 ಏಲಕ್ಕಿ, ಪಚ್ಚಕರ್ಪೂರ ಸ್ವಲ್ಪ, ಕೇಸರಿ ದಳಗಳು, ಅರಿಶಿನ ಚಿಟಿಕೆ
ಮಾಡುವ ವಿಧಾನ: ಸಕ್ಕರೆ, ಏಲಕ್ಕಿ ಮತ್ತು ಪಚ್ಚಕರ್ಪೂರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಅರಿಶಿನ, ಕೇಸರಿ ದಳಗಳು, ಮಿಲ್ಕ್ ಪೌಡರ್ ಮತ್ತು ಬಾದಾಮಿಯನ್ನು ಅದೇ ಪುಡಿ ಜೊತೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಅದಕ್ಕೆ ಕತ್ತರಿಸಿದ ಬಾದಾಮಿ ಪಿಸ್ತಾ ಬೆರೆಸಿದರೆ ಬಾದಾಮಿ ಪೌಡರ್ ಸಿದ್ಧ. ಈಗ ಒಂದು ಬಾಣಲೆಯಲ್ಲಿ  3 ಕಪ ಗಟ್ಟಿ ಹಾಲನ್ನು ಹಾಕಿ  ಅದು ಅರ್ಧ  ಆಗುವವರೆಗೂ ಕುದಿಸಿ ಅದಕ್ಕೆ ಮಾಡಿಕೊಂಡ ಬದಾಮಿ ಪುಡಿ, ೪ ಚಮಚ ಸಕ್ಕರೆ, ಅರ್ಧ ಕಪ್ ಹಾಲಿನ ಪುಡಿ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿ ನಂತರ ಫ್ರಿಡ್ಜ್ ನಲ್ಲಿ 3 ಗಂಟೆ ಇಟ್ಟು ತಣಿಸಿದರೆ ರಬ್ಡಿ ಸಿದ್ಧ. 
ಈಗ ಬ್ರೆಡ್ ತುಂಡುಗಳನ್ನು ವೃತ್ತಾಕಾರವಾಗಿ ಕತ್ತರಿಸಿ ಅದಕ್ಕೆ ತುಪ್ಪ ಹಾಕಿ ಎರಡೂ ಕಡೆ ಸ್ವಲ್ಪ ಸಿಮ್ ಉರಿಯಲ್ಲಿ ರೋಸ್ಟ್ ಮಾಡಿ.ಆ ಬ್ರೆಡ್ ತುಂಡುಗಳನ್ನು ತಟ್ಟೆಯಲ್ಲಿ ಇಟ್ಟು ನಂತರ ತಣಿಸಿದ ರಬ್ಡಿ ಹಾಕಿ ಮೇಲೆ ಕತ್ತರಿಸಿದ ಬಾದಾಮಿ ಪಿಸ್ತಾ ಚೂರುಗಳನ್ನು ಉದುರಿಸಿದರೆ ಬ್ರೇಡ್ ರಸ್ಮಲಾಯಿ ಸಿದ್ಧ.

ಅಪ್ಪಿ ಪಾಯಸ
ಸಾಮಗ್ರಿ:
ಚಿರೋಟಿ ರವೆ ಒಂದು ಕಪ್, ಮೈದಾ ಹಿಟ್ಟು 1 ಟೀ ಚಮಚ,  ಉಪ್ಪು ಚಿಟಿಕೆ, ತುಪ್ಪ 1 ಚಮಚ,  ಗಟ್ಟಿ ಹಾಲು 3 ಕಪ್, ಸಕ್ಕರೆ ½ ಕಪ್, ಏಲಕ್ಕಿ ಪುಡಿ ½ ಚಮಚ, ಕೇಸರಿ ಎಳೆಗಳು 8, ಗೊಡಂಬಿ ದ್ರಾಕ್ಷಿ ಸ್ವಲ್ಪ.
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ರವೆ, ಮೈದಾ, ಉಪ್ಪು ಹಾಗೂ ತುಪ್ಪ ಹಾಕಿ ಸ್ವಲ್ಪವೇ ನೀರನ್ನು ಹಾಕಿ ಗಟ್ಟಿಯಾಗಿ ಕಲಸಿ ಒಂದು ಗಂಟೆ ನೆನೆಯಲು ಬಿಡಿ.  ಕಲಸಿಟ್ಟ ಹಿಟ್ಟನ್ನು ಮತ್ತೆ ಚೆನ್ನಾಗಿ ನಾದಿಕೊಂಡು ಸ್ವಲ್ಪ ತುಪ್ಪ ಸವರಿ ಚಿಕ್ಕ ಉಂಡೆಯನ್ನಾಗಿ ಮಾಡಿ ಪುರಿ ಆಕಾರದಲ್ಲಿ ಗರಿಗರಿಯಾಗಿ ಎಣ್ಣೆಯಲ್ಲಿ ಕರಿಯಿರಿ.  ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಮಂದ ಉರಿಯಲ್ಲಿ ಕಾಯಲಿಟ್ಟು ಅರ್ಧ ಪ್ರಮಾಣವಾಗುವರೆಗೂ ಕುದಿಸಿ. ನಂತರ ಪುರಿಗಳನ್ನು ಚಿಕ್ಕದಾಗಿ ಮುರಿದು ಆ ಹಾಲಿಗೆ ಸೇರಿಸಿ ಸಕ್ಕರೆ ಬೆರಸಿ ಐದಾರು ನಿಮಿಷ ಚೆನ್ನಾಗಿ ಕುದಿಸಿ ನಂತರ ಏಲಕ್ಕಿ ಪುಡಿ, ಹಾಲಿನಲ್ಲಿ ನೆನಸಿಟ್ಟ ಕೇಸರಿ ದಳ, ತುಪ್ಪದಲ್ಲಿ ಹುರಿದ ಗೊಡಂಬಿ ದ್ರಾಕ್ಷಿ ಬೇರಸಿ ೨ ನಿಮಿಷ ಕುದಿಸಿ ಕೆಳಗಿಳಿಸಿದರೆ ಅಪ್ಪಿ ಪಾಯಸ ಸಿದ್ಧ.

ಶಂಕರಪೋಳಿ. 
ಸಾಮಗ್ರಿ:

1ಕಪ್. ಹಾಲು. 11/4  ಕಪ್  ಸಕ್ಕರೆ, 1ಕಪ್  ತುಪ್ಪ, 1ಕಪ್  ಗೋದಿ  ಹಿಟ್ಟು, 3ಕಪ್  ಮೈದಾ &ಚಿಟಿಗೆ  ಉಪ್ಪು. 
ಮಾಡುವ ವಿಧಾನ
ಹಾಲು  ಬಿಸಿ ಮಾಡಿ  ಅದರಲ್ಲಿ  ಸಕ್ಕರೆ, ತುಪ್ಪ, ಉಪ್ಪು ಕರಗಿಸಿ ಹಿಟ್ಟಿಗೆ ಹಾಕಿ  ಚೆನ್ನಾಗಿ  ಮಿಕ್ಸ್  ಮಾಡಿ  ಚಪಾತಿ  ಹಿಟ್ಟಿನ  ಹದಕ್ಕೆ  ಕಲಿಸಿ  ಅರ್ಧ  ಗಂಟೆ ಇಡಿ.  ನಂತರ  ಚಪಾತಿಗಿಂತ  ಸ್ವಲ್ಪ  ದಪ್ಪ  ಲಟ್ಟಿಸಿ  ಶಂಕರಪೋಳಿ  ಶೇಪ್  ಕಟ್  ಮಾಡಿ  ಗೋಲ್ಡನ್  ಕಲರ್  ಫ್ರೈ  ಮಾಡಿದರೆ  ಶಂಕರಪೋಳಿ  ಸಿದ್ಧ.