ಗುಡೂರು ಚೆಕ್ ಪೋಸ್ಟ್: ದಾಖಲೆ ಇಲ್ಲದೇ ನಗದು ಸಾಗಿಸುತ್ತಿದ್ದ ವಾಹನ ವಶಕ್ಕೆ..!

ಗುಡೂರು ಚೆಕ್ ಪೋಸ್ಟ್: ದಾಖಲೆ ಇಲ್ಲದೇ ನಗದು ಸಾಗಿಸುತ್ತಿದ್ದ ವಾಹನ ವಶಕ್ಕೆ..!


ಬಾಗಲಕೋಟೆ: ದಾಖಲೆ ಇಲ್ಲದೇ ೧೬ ಲಕ್ಷ ರೂ.ಗಳ ಹಣ ಸಾಗಿಸುತ್ತಿದ್ದ ವಾಹನವನ್ನು ಅಮಿನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಗುಡೂರು ಚೆಕ್ ಪೋಸ್ಟ್ನಲ್ಲಿ ವಶಪಡಿಸಿಕೊಳ್ಳಲಾಗಿದೆ. 
 ಕಿಯಾ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಯಲಬುರ್ಗಾದ ಸುನೀಲ್ ರಾಮಣ್ಣ ಉಪ್ಪಾರ(೨೬), ಬಸನಗೌಡ ಮುದಕನಗೌಡ ಮಾಲಿಪಾಟೀಲ(೫೦), ಕಳಕಪ್ಪ ಮುದಿಯಪ್ಪ ಯಗರಿ(೨೭), ಹುಸೇನಸಾಬ್ ಬಾಬಾಸಾಬ್ ಮಕಾಂದಾರ್(೩೦) ಮತ್ತು ಮಂಗಳಗುಡ್ಡ ಗ್ರಾಮದ ವೀರಭದ್ರಪ್ಪ ದೇವೇಂದ್ರಪ್ಪ ತುಪ್ಪದ ಅವರನ್ನು ವಶಕ್ಕೆ ಪಡೆಯಲಾಗಿದೆ.