ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಬದ್ದ : ಅಮರನಾಥ
ಮಾಧ್ಯಮ ಸಂವಾದ ಕಾರ್ಯಕ್ರಮ | ಅಕ್ರಮ ಚಟುವಟಿಕೆ ತಡೆಗೆ ಕ್ರಮ
ಬಾಗಲಕೋಟೆ :ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ಮೇಲೆ ಕಡಿವಾಣ, ಡ್ರಗ್ಸ್ ಕಂಟ್ರೋಲ್, ಕಡ್ಡಾಯ ಹೆಲ್ಮೆಟ್ ಅಭಿಯಾನ ಹಾಗೂ ಗ್ರಾಮ ವಾಸ್ತವ್ಯ ಸೇರಿದಂತೆ ಇನ್ನು ಅನೇಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸನ್ನದ್ದವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಮಾದ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಲ್ಲೆಗೆ ಬಂದು ಅಧಿಕಾರ ವಹಿಸಿಕೊಂಡಾಗ ನಗರದಲ್ಲಿ ಟ್ರಾಪಿಕ್ ಸಿಗ್ನಲ್‌ಗಳು ಬಂದ್ ಆಗಿರುವದನ್ನು ಕಂಡು ತಕ್ಷಣ ದುರಸ್ಥಿ ಮಾಡಿಸಿ, ೫ ಕಡೆಗಳಲ್ಲಿ ಪ್ರಾರಂಭಗೊಳಿಸಲಾಗಿದೆ. ಗದ್ದನಕೇರಿ ಕ್ರಾಸ್‌ನಲ್ಲಿ ಟ್ರಾಪಿಕ್ ಕಂಟ್ರೋಲ್ ಮಾಡಲು ಸಿಗ್ನಲ್ಸ್ ಹಾಕಲು ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಈ ಕಾರ್ಯ ಬೇಗನೆ ಕಾರ್ಯಗತಗೊಳ್ಳಲಿದೆ ಎಂದರು.
ನಗರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಶೇ.೯೦ ರಷ್ಟು ಹತೋಟಿಗೆ ತರಲಾಗಿದೆ. ಸಾದ್ಯವಾದಷ್ಟು ಅಕ್ರಮ ಚಟುವಟಿಕೆಗಳನ್ನು ತಡೆಯಲಾಗುತ್ತಿದ್ದು, ಅಲ್ಲಲ್ಲಿ ಕಂಡುಬರುವ ಅಕ್ರಮ ಚಟುವಟಿಕೆಗಳ ಕಂಡುಬAದಲ್ಲಿ ತಮ್ಮ ಗಮನಕ್ಕೆ ತರಲು ತಿಳಿಸಿದರು. ಗಣೇಶ ಹಬ್ಬ ಹಾಗೂ ಆರ್.ಎಸ್.ಎಸ್ ಪಥಸಂಚಲನ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗಿದೆ ಎಂದರು.
ಗ್ರಾಮ ವಾಸ್ತವ್ಯ ನನ್ನ ಮನದಾಸೆಯಾಗಿದ್ದು, ಗ್ರಾಮೀಣ ಜನತೆ ಹಾಗೂ ಪೊಲೀಸ್ ನಡುವಿನ ಸಂಬAಧಗಳು ಪರಸ್ಪರ ವಿಶ್ವಾಸದಿಂದಿರಲಿ ಎಂಬ ಉದ್ದೇಶದಿಂದ ಜಿಲ್ಲೆಯಲ್ಲಿರುವ ಸುಮಾರು ೬೦೦ ಕ್ಕಿಂತ ಹೆಚ್ಚು ಹಳ್ಳಿಗಳಿದ್ದು, ಅದರಲ್ಲಿ ೫೦ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಾಸ್ತವ್ಯದಲ್ಲಿ ಸಂಜೆ ೬ ರಿಂದ ಬೆಳಗಿನ ೬ ಗಂಟೆವರೆಗೆ ಗ್ರಾಮದಲ್ಲಿ ಇದ್ದು ಕಾನೂನು ಸುವ್ಯವಸ್ಥೆಗೆ ಸಂಬAಧಿಸಿದ ಸಮಸ್ಯೆಗಳನ್ನು ಶೇ.೬೦ ಬಗೆಹರಿಸುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ಕೂಡಾ ಬಂದಿದೆ ಎಂದರು.
ಜಿಲ್ಲೆಗೆ ನೂತನವಾಗಿ ೧೦ ದ್ವಿಚಕ್ರ ವಾಹನ (ಚಿತಾ ಪಡೆ) ನಗರದಲ್ಲಿ ಸಂಚಾರಕ್ಕೆ ತಯಾರಾಗಿದ್ದು, ಸಮಸ್ಯೆ ಇರುವ ಸ್ಥಳದಿಂದ ೧೧೨ ನಂಬರಿಗೆ ಕರೆ ಮಾಡಿದಾಗ ನಗರದಲ್ಲಿ ಇದ್ದರೆ ೧೦ ನಿಮಿಷ, ಗ್ರಾಮೀಣ ಪ್ರದೇಶದಲ್ಲಾದರೆ ೨೦ ನಿಮಿಷದ ಒಳಗೆ ಪೊಲೀಸ್ ಸಿಬ್ಬಂದಿ ಹಾಜರಿರುತ್ತಾರೆ. ಇದರಿಂದ ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದಾಗುವದನ್ನು ತಪ್ಪಿಸಲು ಸಹಕಾರಿಯಾಗುತ್ತದೆ. ಕಳೆದ ೧೦ ತಿಂಗಳಲ್ಲಿ ೨೨೮೫ ಪ್ರಕರಣಗಳನ್ನು ವಿಲೆ ಮಾಡಲಾಗಿದೆ ಎಂದರು.
ಪ್ರತಿ ಭಾರಿ ರೈತರ ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರ ಮಧ್ಯ ಸಮಸ್ಯೆಗಳು ಬರುತ್ತಿದ್ದವು. ಅವರೆಲ್ಲರ ಸಮಸ್ಯೆಯನ್ನು ಆಲಿಸಲಾಗಿದೆ. ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ ಬಾಕಿ ಹಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಗಾಂಜಾ ಪ್ರಚಲಿತವಾಗಿದ್ದು, ಅಲ್ಲಲ್ಲಿ ಕೆಲವು ಪ್ರಕರಣಗಳು ಕಂಡುಬAದಿವೆ. ಇದನ್ನು ನಿಗ್ರಹಿಸುವ ದೃಷ್ಠಿಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ. ಗಾಂಜಾ ಮಾರುವವರಷ್ಟೇ ಅಲ್ಲ ಅದನ್ನು ಉಪಯೋಗಿಸುವವರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಕಬ್ಬು ಹಂಗಾಮಿನಲ್ಲಿ ಟ್ಯಾಕ್ಟರ ಬಳಸುವ ಧ್ವನಿವರ್ದಕಗಳನ್ನು ಬಂದ್ ಮಾಡಲಾಗಿದೆ. ಕೆಲವು ಧ್ವನಿವರ್ಧಕಗಳನ್ನು ನಾಶಪಡಿಸಲಾಗಿದೆ. ಬರುವ ಅಯೋದ್ಯ ರಾಮಮಂದಿರ ಉದ್ಘಾಟನೆ ಹಾಗೂ ಲೋಕಸಭಾ ಚುನಾವಣೆ ಲಕ್ಷದಲ್ಲಿ ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದೆ. ಅದರಲ್ಲಿ ಫೇಸ್ಬುಕ್, ಇನ್‌ಸ್ಟಾಗ್ರಾಮ, ಟ್ವಿಟ್ಟರ್ ಬಳಕೆದಾರರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಇಂತಹ ತಾಣದಲ್ಲಿ ಪ್ರಚೋದನ ಕಾರಿ ಹೇಳಿಕೆಗಳನ್ನು ಪೋಸ್ಟ ಮಾಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮವಹಿಸಲಾಗುತ್ತಿದೆ ಎಂದರು. ಸಂವಾದದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಧಲಬಂಜನ ಇದ್ದರು.