ಅ.೨ರಿಂದ ಗ್ರಾಮ ಪಂಚಾಯಿತಿಗಳ ಸೇವೆ ಸ್ಥಗಿತ...!

ಅ.೨ರಿಂದ ಗ್ರಾಮ ಪಂಚಾಯಿತಿಗಳ ಸೇವೆ ಸ್ಥಗಿತ...!
ಬಾಗಲಕೋಟೆ :ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಪಂ ಸಿಬ್ಬಂದಿ, ಸದಸ್ಯ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅ.೪ ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗುತ್ತಿದೆ ಎಂದು ಪಿಡಿಒಗಳ ಸಂಘದ ರಾಜ್ಯಾಧ್ಯಕ್ಷ ರಾಜು ವಾರದ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ನಮ್ಮ ಸಮಸ್ಯೆಗಳ ಕುರಿತಾಗಿ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲö. ಹೀಗಾಗಿ ಅ.೨ ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಯಿAದ ಒದಗಿಸುವ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಅ.೪ ರಂದು ಪಿಡಿಒಗಳು, ಗ್ರಾಪಂ ಸದಸ್ಯರು, ಅಧ್ಯಕ್ಷö, ಉಪಾಧ್ಯಕ್ಷರು, ಸಿಬ್ಬಂದಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಆರಂಭಿಸಲಿದ್ದಾರೆ. ಅಂದಾಜು ೨ ಲಕ್ಷ ಜನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಬಹುತೇಕ ಸೇವೆಗಳು ಸ್ಥಗಿತಗೊಳ್ಳಲಿದ್ದುö, ನೌಕರರು ಬೆಂಗಳೂರಿಗೆ ಬರಲಿದ್ದಾರೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಯಲಿದೆ" ಎಂದು ಎಚ್ಚರಿಸಿದರು. 

ಪಿಡಿಒಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ, ಇಲಾಖೆಯಿಂದ ರೂಪಿಸುವ ಯೋಜನೆಗಳು ಅಸರ್ಮಪಕವಾಗಿರುತ್ತವೆ. ಇವುಗಳನ್ನು ಜಾರಿಗೊಳಿಸುವಲ್ಲಿ ಸಿಬ್ಬಂದಿ ಅವಶ್ಯಕತೆಯಿದೆ. ಆದರೆ ಸಿಬ್ಬಂದಿ ನೇಮಕಗೊಳಿಸದ ಕಾರಣ ಪಿಡಿಒಗಳು ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ೧೫೦ಕ್ಕೂ ಹೆಚ್ಚು ಅಧಿಕಾರಿಗಳು ಮೃತಪಟ್ಟಿದ್ದಾರೆ. ಪಂಚಾಯಿತಿ ಸಿಬ್ಬಂದಿ, ಕಾರ್ಯದರ್ಶಿ, ಲೆಕ್ಕ ಸಹಾಯಕರ ಹುದ್ದೆ ಭರ್ತಿಯಾಗದ ಕಾರಣ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ನಿಗದಿತ ಸಂಖ್ಯೆಯಲ್ಲಿ ಮಕ್ಕಳಿ ನೋಂದಣಿ ಇಲ್ಲದಿದ್ದರೂ ಕೂಸಿನ ಮನೆ ನಡೆಸುವಂತೆ ಸೂಚನೆ ನೀಡಲಾಗುತ್ತಿದೆ. ನರೇಗಾದಡಿ ಬೇಡಿಕೆ ಇಲ್ಲದಿದ್ದರೂ ಗುರಿ ನೀಡಲಾಗುತ್ತದೆ. ಪಿಡಿಒಗಳನ್ನು ಬಿ ಗ್ರೂಪ್ ವೃಂದಕ್ಕೆ ಸೇರ್ಪಡೆಗೊಳಿಸುವಂತೆ ಬೇಡಿಕೆಯಿಡಲಾಗಿದೆ, ಆದರೆ ಸರಕಾರ ೧,೫೦೦ ಹುದ್ದೆ ಕಡಿಮೆ ಮಾಡಿ ಗ್ರೂಪ್ ಬಿ ಕಿರಿಯ ವೃಂದ ಎಂಬ ಹುದ್ದೆಗಳನ್ನು ಸೃಷ್ಟಿಸಿದೆ ಎಂದರು. 
ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾಯಿಸುವ ನಿಯಮ ಕೈಬಿಡಬೇಕು,  ಪೊಲೀಸ್ ಇಲಾಖೆ ಮಾದರಿಯಲ್ಲಿ ಕುಂದುಕೊರತೆ ಪ್ರಾಧಿಕಾರ ಸೃಷ್ಟಿಸಬೇಕು. ಕಾರ್ಯದರ್ಶಿಗಳಿಗೆ ಮುಂಬಡ್ತಿö, ಅನುಪಾತ ಹೆಚ್ಚಳ, ದ್ವಿತೀಯ ದರ್ಜೆ ಸಹಾಯಕರಿಗೆ ಬಡ್ತಿö, ಡಾಟಾ ಎಂಟ್ರಿ ಆಪರೇಟರ್, ಕರ ವಸೂಲಿಗಾರ ಸೇರಿದಂತೆ ಸಿಬ್ಬಂದಿ ನಿವೃತ್ತಿ ಹಂತದ ಐದು ವರ್ಷವಿರುವಾಗ ಗ್ರೇಡ್ ೨ ಕಾರ್ಯದರ್ಶಿ ಪದೋನ್ನತಿ ನೀಡಬೇಕು  ಎಂದರು. 
ಸಂಘಟನೆ ಉಪಾಧ್ಯಕ್ಷ ಬಸವರಾಜ ಮುನವಳ್ಳಿö, ಪಿ.ಬಿ.ಮುಳ್ಳೂರ, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಸದಾಶಿವ ಕಣಬೂರ, ಹಣಮಂತ ಕಳಾಕೋಟೆ, ಎಂ.ಎಸ್.ಚಲವಾದಿ, ಜಿ.ಎಸ್.ಹನಮಸಾಗರ, ಎಸ್.ಕೆ.ಹಿರೇಮನಿ ಇದ್ದರು.