Exclusive:ಕೆರೂರ ಘಟನೆ: ಬಾದಾಮಿ ಸಿಪಿಐ ಬನ್ನೆ ಅಮಾನತು
ಬಾದಾಮಿ ವೃತ್ತ ನಿರೀಕ್ಷಕ ಕರಿಯಪ್ಪ ಬನ್ನಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಆದೇಶಿಸಿದ್ದಾರೆ.
ಬಾಗಲಕೋಟೆ:
ಕೆರೂರು ಗಣೇಶ ಭಕ್ತರ ಬಂಧನ, ದೌರ್ಜನ್ಯ ಪ್ರಕರಣದಲ್ಲಿ ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಘಟನೆ ನಂತರ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಶರಣಬಸು ಸಜ್ಜನ ಸೇರಿ ಇತರರನ್ನು ಠಾಣೆಗೆ ಕರೆಯಿಸಿ ಬೈದು, ಹಲ್ಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೇ ಮುಂದಿನ ಬೆಳವಣಿಗೆಗಳ ನಿರ್ವಹಿಸುವಲ್ಲಿಯೂ ನಿರ್ಲಕ್ಷ್ಯತನ ತೋರಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಆದೇಶದಲ್ಲಿ ತಿಳಿಸಿದ್ದಾರೆ.
ಕರಿಯಪ್ಪ ಬನ್ನೆ ಅವರ ವಿರುದ್ಧದ ವಿಚಾರಣೆಯನ್ನು ಬಾಕಿಯಿಟ್ಟು ಆದೇಶಿಸಲಾಗಿದ್ದು, ಅಮಾನತ್ತಿನ ಅವಧಿಯಲ್ಲಿ ಕೇಂದ್ರ ಸ್ಥಾನ ಬಿಟ್ಟು ಕದಲದಂತೆ ಆದೇಶದಲ್ಲಿ ಸೂಚಿಸಲಾಗಿದೆ.