ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅಡ್ಡಿ: ಬಿಟಿಎಸ್ ಸೇರಿ ಬ್ರಾಹ್ಮಣ ಸಂಘಟನೆಗಳ ಖಂಡನೆ 

 ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅಡ್ಡಿ: ಬಿಟಿಎಸ್ ಸೇರಿ ಬ್ರಾಹ್ಮಣ ಸಂಘಟನೆಗಳ ಖಂಡನೆ 
ಬಾಗಲಕೋಟೆ: ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಯಜ್ಞೋಪವಿತ(ಜನಿವಾರ) ಧರಿಸಿದಕ್ಕೆ ಸಿಇಟಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡದಿರುವುದು ನಾಚಿಗೇಡಿನ ಸಂಗತಿಯಾಗಿದೆ. ಈ ವಿಚಾರದಲ್ಲಿ ತಪ್ಪು ಎಸೆಗಿದವರನ್ನು ಅಮಾನತುಗೊಳಿಸುವುದರೊಂದಿಗೆ ಅವರ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ  ತಂದಿರುವ ಪ್ರಕರಣ ದಾಖಲಿಸಿ ಬಂಧಿಸಬೇಕೆAದು ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಒತ್ತಾಯಿಸಿದ್ದಾರೆ. 
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪರೀಕ್ಷೆಯನ್ನು ಬಿಗಿಗೊಳಿಸುವ ನೆಪದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಈಗ ಅದು ಅತಿರೇಕಕ್ಕೆ ತಲುಪಿದೆ. ಬೀದರ್‌ನಲ್ಲಿ ಜನಿವಾರ ತೆಗೆಯಲು ಒಪ್ಪದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಲು ಯಾರಿಗೂ ಅಧಿಕಾರವಿಲ್ಲ. ಸರ್ಕಾರದ ಆದೇಶ ಇಲ್ಲದಿದ್ದರೂ ಅಧಿಕಾರಿಗಳು ಈ ರೀತಿ ತಪ್ಪು ಎಸೆಗಿರುವುದು ಯಾಕೆ. ಸಿಇಟಿ ಬರೆಯದೆ ಆ ವಿದ್ಯಾರ್ಥಿಯ ಇಂಜನಿಯರಿAಗ್ ಕನಸು ಭಗ್ನಗೊಂಡಿದೆ. ಅಧಿಕಾರಿಗಳ ಎಡವಟ್ಟಿನಿಂದ ಆತ ಪರೀಕ್ಷೆ ಬರೆಯದ ಕಾರಣ ಸರ್ಕಾರ ಆತನ ವ್ಯಾಸಂಗಕ್ಕೆ ಸೂಕ್ತ ಅವಕಾಶ ಮಾಡಿಕೊಡಬೇಕು. ಅಲ್ಲದೇ ತಪ್ಪಿತಸ್ಥ ಅಧಿಕಾರಿಗಳು, ಸಿಬ್ಬಂದಿಯನ್ನು ಕೇವಲ ಅಮಾನತಿನಲ್ಲಿಟ್ಟರೆ ಸಾಲದು ಅವರನ್ನು ಜೈಲಿಗಟ್ಟುವ ಕೆಲಸವಾಗಬೇಕಂದು ಅವರು ಆಗ್ರಹಿಸಿದ್ದಾರೆ. 
ಘಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಹಾಗೂ ವಿಶ್ವ ಮಧ್ವಮಹಾಪರಿಷತ್‌ಗಳು ಸಹ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ.