ಪಕ್ಷದಲ್ಲಿನ‌ ಬೆಳವಣಿಗೆಗಳ ಬಗ್ಗೆ ಬೇಸರ: ಕಟೀಲ್ ಗೆ ಪತ್ರ ಬರೆದ ಮತ್ತೋರ್ವ ಶಾಸಕ...!

ಸಚಿವರು, ಶಾಸಕರ ಬಹಿರಂಗ ಹೇಳಿಕೆಗಳಿಂದ ಬಿಜೆಪಿಗೆ ಇರಿಸುಮುರಿಸು ಎಂದಿರುವ ಶಾಸಕ ಸುನಿಲ್ ಕುಮಾರ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ‌ ಕುಮಾರ ಕಟೀಲ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಇಲ್ಲಿದೆ‌ ನೋಡಿ.

ಪಕ್ಷದಲ್ಲಿನ‌ ಬೆಳವಣಿಗೆಗಳ ಬಗ್ಗೆ ಬೇಸರ: ಕಟೀಲ್ ಗೆ ಪತ್ರ ಬರೆದ ಮತ್ತೋರ್ವ ಶಾಸಕ...!

ಬಾಗಲಕೋಟೆ

ಕಾರ್ಕಳ ಶಾಸಕ ಸುನಿಲ್ ಕುಮಾರ್ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಪಕ್ಷ ನಿಷ್ಠೆ ಮೂಲಕ ಕಾರ್ಯಕರ್ತರು ಗೌರವಗಳಿಸಿ ಸುನಿಲ್ ಕುಮಾರ ಅವರು ಪಕ್ಷದ ವ್ಯವಸ್ಥೆ ಕುರಿತಾಗಿ ಬಹಿರಂಗವಾಗಿ ಮಾತಾಡಿರುವುದು ಬಹಳ ವಿರಳ. ಅವರು ಬರೆದಿರುವ ಪತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೋದಿ ಮಾದರಿ ಆಡಳಿತ, ಜನಪರ ಕಾರ್ಯಗಳು ರಾಜ್ಯ ಸರ್ಕಾರದಿಂದಲೂ ಆಗಬೇಕೆಂದಿರುವ ಅವರು ಕೂಡಲೇ ಎಲ್ಲ ಶಾಸಕರ ಸಭೆಯನ್ನು ನಡೆಸುವಂತೆ ಮನವಿ‌ ಮಾಡಿದ್ದಾರೆ.

ಮೂಲ-ವಲಸಿಗ ಎಂಬ ಭೇದ ತೊರೆದು ಶಿಸ್ತಿನ‌ ಚೌಕಟ್ಟಿನೊಳಗೆ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಾಸಕರ ಸಲಹೆಗಳನ್ನು ಅರಿಯುವಂತೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಕೆಲ ಸಚಿವರು, ಶಾಸಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವುದು ಬೇಸರ ಮೂಡಿಸಿದೆ. ಪಕ್ಷದ ಬೆಳವಣಿಗೆಗೆ ಇದು ಸರಿಯಲ್ಲ ಹೀಗಾಗಿ ನಮ್ಮ ಅಭಿಪ್ರಾಯಗಳನ್ನು ಪರಿಗಣಿಸಿ ಸಭೆ ನಡೆಸುವಂತೆ ಕೋರಿದ್ದಾರೆ.

ಅವರು ಬರೆದಿದ್ದಾರೆ ಎನ್ನಲಾದ ಪತ್ರದ ಪ್ರತಿ ನಾಡನುಡಿಗೆ ಲಭ್ಯವಾಗಿದ್ದು, ಇಲ್ಲಿದೆ ನೋಡಿ.