ನಾಳೆ ವಿದ್ಯಾಗಿರಿಯಲ್ಲಿ ಪವರ್ ಕಟ್

ನಾಳೆ ವಿದ್ಯಾಗಿರಿಯಲ್ಲಿ ಪವರ್ ಕಟ್

ನಾಡನುಡಿ ನ್ಯೂಸ್
ಬಾಗಲಕೋಟೆ:
ಬಾಗಲಕೋಟೆ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ 11 ಕೆವಿ ಬಸ್‍ನ ರಿ-ಕಂಡಕ್ಟರಿಂಗ್ ಕಾಮಗಾರಿ ಮತ್ತು ಶಿಥಿಲಗೊಂಡಿರುವ ಕಂಬಗಳ ಬದಲಾವಣೆ ಕಾಮಗಾರಿ ನಿರ್ವಹಣೆ ನಿಮಿತ್ತಫೆ.19 ರಂದು ಬೆಳಿಗ್ಗೆ 9 ರಿಂದ ಸಂಜೆ 5 ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

         ಬಾಗಲಕೋಟೆ 110/11 ಕೆವಿ ಉಪ ಕೇಂದ್ರದಿಂದ ಹೊರಡುವ ಎಫ್-1 ವಿದ್ಯಾಗಿರಿ ವಿದ್ಯುತ್ ಮಾರ್ಗದ ಮೇಲೆ ಬರುವ ರಸ್ತೆ ಸಂ.3 ರಿಂದ 22 ವರೆಗೆ ನಂದೀಶ್ವರ ನಗರ, ಬಿಟಿಡಿಎ ಕಾಲೋನಿ, ಪರಿವೀಕ್ಷಣಾ ಮಂದಿರ, ಬಳೆ ಮುರನಾಳ ರಸ್ತೆ, ಕುದರಿಕೊನ್ನೂರ ಲೈಔಟ್, ರೋಣದ ಲೇಔಟ್, ರೂಪಲ್ಯಾಂಡ್, ಇಡಸ್ಟ್ರೀಯಲ್ ಏರಿಯಾ, ಸೂಳಿಭಾವಿ ಲೇಔಟ್, ಬೆಂಡಿಗೇರಿ ಲೇಔಟ, ಶೆಟ್ಟಿ ಲೇಔಟ್, ಹೊಸ ಪಿಯುಸಿ ಕಾಲೇಜ ಏರಿಯಾ, ಎಂ.ಬಿ.ಎ ಕಾಲೇಜ, ಹಾಸ್ಟೇಲ್ ರಸ್ತೆ, ಬಿವಿವಿಎಸ್ ಕಾಂಪ್ಲೇಕ್ಸ್ ಸ್ಥಳಗಳಲ್ಲಿ ಹಾಗೂ ಎಫ್-8 ವಿದ್ಯುತ್ ಮಾರ್ಗದ ಮೇಲೆ ಬರುವ ಐಟಿಐ ಕಾಲೇಜ, ಹವೇಲಿ, ಕೆಇಬಿ ಕ್ವಾಟರ್ಸ್, ಗುರುಬಸವ ಕಾಲೋನಿ ಎಫ್-2 ರೂರಲ್ ಎನ್.ಜಿವಾಯ್ ಮಾರ್ಗದ ಮೇಲೆ ಬರುವ ಬನ್ನಿದಿನ್ನಿ, ಆನದಿನ್ನಿ, ವೀರಾಪೂರ, ಮುರನಾಳ ಮತ್ತು ಕೆಸನೂರ ಗ್ರಾಮಗಳು ಹಾಗೂ ಎಫ್-3 ಗದ್ದನಕೇರಿ ಐಪಿ, ಎಫ್-6 ವೀರಾಪೂರ ಐಪಿ, ಎಫ್-5 ಯಡಹಳ್ಳಿ ಐಪಿ, ಎಫ್-12 ಸಿಂದಗಿ ಐಪಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.