ಬಾಗಲಕೋಟೆಗೂ ಉಂಟು ಉಡ್ತಾ ಪಂಜಾಬ್ ನಂಟು..!
ಪಂಜಾಬ್ ನಿಂದ ತಂದು ಅಫೀಮ್ ಸಾಗಿಸುತ್ತಿದ್ದ ಇಬ್ಬರನ್ನು ಜಿಲ್ಲೆಯಲ್ಲಿ ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ:ಡ್ರಗ್ಸ್ ನಿಂದ ಸದ್ದು ಮಾಡಿ "ಉಡ್ತಾ" ಪಂಜಾಬ್ ಹೆಸರಿನಲ್ಲಿ ಚಿತ್ರ ಬಂದಿದ್ದು ನಿಮಗೆ ನೆನಪಿದ್ದರೆ ಇದೀಗ ಆ ಜಾಲ ಬಾಗಲಕೋಟೆಗೂ ವಿಸ್ತರಿಸಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಜಿಲ್ಲೆಯ ಬೀಳಗಿಯಲ್ಲಿ ಪಂಜಾಬ್ ಮೂಲದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿದ್ದು, ಲಕ್ಷಾಂತರ ಮೌಲ್ಯದ ಅಫೀಮ್ ವಶಪಡಿಸಿಕೊಳ್ಳಲಾಗಿದೆ.
ಪಂಜಾಬ್ ನಿಂದ ಇತರ ಗೂಡ್ಸ್ ಗಳ ಜತೆಹೆ ಅಫೀಮು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬೀಳಗಿಯಲ್ಲಿ ಅಬಕಾರಿ ಪೊಲೀಸರು ಬಂಧಿಸಿದ್ದು, ಅದನ್ನು ಎಲ್ಲಿಗೆ ಸಾಗಿಸಲಾಗುತಿತ್ತು, ಅದನ್ನು ಜಿಲ್ಲೆಯಲ್ಲಿ ಖರೀದಿಸುತ್ತಿದ್ದ ವ್ಯಕ್ತಿಗಳು ಯಾರೆಂಬ ವಿಚಾರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.
ಬಂಧಿತರ ಇಬ್ಬರು ವ್ಯಕ್ತಿಗಳು ಲಾರಿ ಮಾಲೀಕರು ಕಂ ಚಾಲಕರಾಗಿದ್ದು , ಜಿಲ್ಲೆಯಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಅಪಾಯಕಾರಿ ಅಫೀಮು ಮಾರಾಟ ಮಾಡುತ್ತಿದ್ದರೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಜಿಲ್ಲೆಯಲ್ಲಿ ಡಾಬಾಗಳ ಮೂಲಕ ಮಾರಾಟ ನಡೆಯುತ್ತಿರುವ ಶಂಕೆಯೂ ವ್ಯಕ್ತವಾಗಿದೆ. ಅಂದಾಜು ಐದು ಲಕ್ಷ ರೂ.ಮೌಲ್ಯದ ಅಫೀಮ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.