ಬಿಜೆಪಿ ಭರ್ಜರಿ ಮತಬೇಟೆ ಶುರು..!

ಬಿಜೆಪಿ ಭರ್ಜರಿ ಮತಬೇಟೆ ಶುರು..!

ಬಾಗಲಕೋಟೆ:ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರು ಬಾಗಲಕೋಟೆ ಆರಾಧ್ಯದೈವ ಮೋಟಗಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ‌‌ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಅವರ ಪುತ್ರ ಡಾ.ನವೀನ್ ಚರಂತಿಮಠ ವಿದ್ಯಾಗಿರಿಯಲ್ಲಿ ಹಾಗೂ ಪತ್ನಿ ರಾಜೇಶ್ವರಿ ಅವರು ನವನಗರದಲ್ಲಿ ಬಿಜೆಪಿಗೆ ಮತ ನೀಡುವಂತೆ ಮನೆ,ಮನೆಗೆ ತೆರಳಿ ಮನವಿ ಮಾಡಿದರು.

ವಿದ್ಯಾಗಿರಿ ಬಿಟಿಡಿಎ ಮುಂಭಾಗದ ನಂದಿಕೇಶ್ವರ ಕಾಲನಿ ಪ್ರದೇಶದಲ್ಲಿ ಡಾ.ನವೀನ ಚರಂತಿಮಠ ಅವರು ಕಾರ್ಯಕರ್ತರೊಂದಿಗೆ ತೆರಳಿ ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮತ ನೀಡುವಂತೆ ಕೋರಿದರು.

ಅತ್ತ ನಗರದಲ್ಲಿ ಶಾಸಕ ಚರಂತಿಮಠ ಅವರು ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಸಂಚರಿಸಿದರು. ಆಗಮಿಸಿದ ಕಾರ್ಯಕರ್ತರೊಂದಿಗೆ ಆಪ್ತತೆಯಿಂದ ಬೆರೆತು, ನಗುವಿನ ಚಟಾಕಿ ಸಿಡಿಸುತ್ತಲೇ ಕಾರ್ಯಕರ್ತರಲ್ಲಿ ಜೋಶ್ ತುಂಬಿದರು.

ಮನೆ, ಮನೆಗೆ ತೆರಳಿ ನಗರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ಮೊದಲ ದಿನವೇ ಶಾಸಕರಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು.

ನವನಗರದಲ್ಲೂ ಶಾಸಕರ ಪತ್ನಿ ರಾಜೇಶ್ವರಿ ಅವರು ಕಾರ್ಯಕರ್ತರ ತಂಡದೊಂದಿಗೆ ಮನೆ, ಮನೆಗೆ ತೆರಳಿ ಮತ ನೀಡುವಂತೆ ಮನವಿ ಮಾಡಿಕೊಂಡರು. ಮಹಿಳಾ ಕಾರ್ಯಕರ್ತರು, ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳು ಅವರಿಗೆ ಕೈ ಜೋಡಿಸಿದರು.