ಜಿಲ್ಲಾ ಕಂದಾಯ ಇಲಾಖೆಗೆ ಪ್ರಶಸ್ತಿಯ ಗರಿ

ಜಿಲ್ಲಾ ಕಂದಾಯ ಇಲಾಖೆಗೆ ಪ್ರಶಸ್ತಿಯ ಗರಿ


ಬಾಗಲಕೋಟೆ:ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ತುö್ಯತ್ತಮವಾಗಿ ನೀಡಿದ ವಿವಿಧ ಅಧಿಕಾರಿಗಳನ್ನು ವರ್ಷದ ಅತ್ತುö್ಯತ್ತಮ ಕಂದಾಯ ಅಧಿಕಾರಿ-೨೦೨೪ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಬಾಗಲಕೋಟೆ ಜಿಲ್ಲೆಯು ೪ ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 
 ಕಂದಾಯ ಇಲಾಖೆಯ ೨೦೨೩-೨೪ನೇ ಸಾಲಿನ ಅತ್ತುö್ಯತ್ತಮ ಕಂದಾಯ ಅಧಿಕಾರಿಗಳ ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಬಾದಾಮಿ ತಹಶೀಲ್ದಾರ ಜೆ.ಬಿ.ಮಜ್ಜಗಿ, ಹುನಗುಂದ ತಾಲೂಕಿನ ಸಂಗಮ ಗ್ರಾಮ ಆಡಳಿತ ಅಧಿಕಾರಿ ನಾಗರಾಜ ಜಿ. ಅವರಿಗೆ ಲಭಿಸಿದೆ. 
 ಪ್ರಶಸ್ತಿಗೆ ಆಯ್ಕೆಯಾದ ಅಧಿಕಾರಿಗಳಿಗೆ ಸೆಪ್ಟೆಂಬರ ೨೭ ರಂದು ಬೆಳಿಗ್ಗೆ ೧೦ ಗಂಟೆಗೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಕಾಸ ಸೌಧ, ಕೊಠಡಿ ಸಂ.೪೧೯ರಲ್ಲಿ ನಡೆಯಲಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.