ಸ್ಥಳೀಯ ಸಂಸ್ಥೆ: ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲು ಪ್ರಕಟ

ಸ್ಥಳೀಯ ಸಂಸ್ಥೆ: ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲು ಪ್ರಕಟ
 
ಬಾಗಲಕೋಟೆ: ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಸರ್ಕಾರ ಕೊನೆಗೂ ಪ್ರಕಟಿಸಿದೆ. ಜಿಲ್ಲೆಯ ೬ ಪಟ್ಟಣ ಪಂಚಾಯಿತಿ, ೫ ಪುರಸಭೆ ಹಾಗೂ ೫ ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪಟ್ಟ ಪ್ರಕಟಗೊಂಡಿದೆ. ಅದರ ವಿವರ ಇಲ್ಲಿದೆ. 
ಪಟ್ಟಣ ಪಂಚಾಯಿತಿ: ಅಮಿನಗಡ: ಅಧ್ಯಕ್ಷ(ಎಸ್‌ಸಿ), ಉಪಾಧ್ಯಕ್ಷ( ಹಿಂದುಳಿದ ವರ್ಗ ಎ), ಬೀಳಗಿ ಅಧ್ಯಕ್ಷ( ಹಿಂದುಳಿದ ವರ್ಗ ಬಿ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಕಮತಗಿ ಅಧ್ಯಕ್ಷ (ಹಿಂದುಳಿದ ವರ್ಗ ಎ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಕೆರೂರ ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ),  ಲೋಕಾಪುರ ಪಟ್ಟಣ ಪಂಚಾಯಿತಿ ಸದಸ್ಯರ ಆಯ್ಕೆಗೆ ಚುನಾವಣೆಯೇ ನಡೆಯದಿರುವಾಗ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಲೋಕಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ  ಸ್ಥಾನಕ್ಕೆ ಪರಿಶಿಷ್ಟ ಪಂಗಡ , ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ಪ್ರಕಟಿಸಲಾಗಿದೆ. ಬೆಳಗಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ(ಹಿಂದುಳಿದ ವರ್ಗ ಎ), ಉಪಾಧ್ಯಕ್ಷ( ಹಿಂದುಳಿದ ವರ್ಗ ಬಿ ಮಹಿಳೆ).  
ಪುರಸಭೆ: 
ಬಾದಾಮಿ ಅಧ್ಯಕ್ಷ(ಸಾಮಾನ್ಯ ವರ್ಗ), ಉಪಾಧ್ಯಕ್ಷ(ಸಾಮಾನ್ಯ ವರ್ಗ), ಗುಳೇದಗುಡ್ಡ ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ), ಹುನಗುಂದ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಮಹಾಲಿಂಗಪುರ ಅಧ್ಯಕ್ಷ(ಸಾಮಾನ್ಯ ವರ್ಗ), ಉಪಾಧ್ಯಕ್ಷ (ಸಾಮಾನ್ಯ ವರ್ಗ ಮಹಿಳೆ), ತೇರದಾಳ ಅಧ್ಯಕ್ಷ(ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಎ ಮಹಿಳೆ).
ನಗರಸಭೆ: 
ಬಾಗಲಕೋಟೆ ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಜಮಖಂಡಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪರಿಶಿಷ್ಟ ಜಾತಿ), ಮುಧೋಳ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ರಬಕವಿ-ಬನಹಟ್ಟಿ(ಹಿಂದುಳಿದ ವರ್ಗ ಎ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಇಳಕಲ್ ಅಧ್ಯಕ್ಷ(ಸಾಮಾನ್ಯ ವರ್ಗ ಬ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ).