ಜಿಲ್ಲೆಯಲ್ಲಿ ೭ ಪಿಎಫ್ಐ ಮುಖಂಡರ ಬಂಧನ..!
ಬಾಗಲಕೋಟೆ:
ಶಾಂತಿ ಪಾಲನೆ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿ ೭ ಪಿಎಫ್ಐ ಸಂಘಟನೆ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಜಮಖಂಡಿ, ಇಳಕಲ್, ಬನಹಟ್ಟಿಯಲ್ಲಿ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ಸಂಘಟನೆ ಜಿಲ್ಲಾಧ್ಯಕ್ಷ ಅಸ್ಗರ್ ಅಲಿ, ಇರ್ಫಾನ್, ಮೊಹಮ್ಮದ್, ರಾಜೇದಾಬ್, ಮುರ್ತುಜ, ಉಮರ್ ಫಾರೂಕ್, ಮುಸಾ ಅವರುಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಪ್ರತಿಭಟನೆ ನೆಪದಲ್ಲಿ ಶಾಂತಿಕದಡುವ ಆರೋಪ ಈ ಏಳು ಜನರ ಮೇಲಿತ್ತು . ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ.
(ಜಾಹೀರಾತು)