ಡಿಸಿಸಿ‌ ಬ್ಯಾಂಕ್ ಚುನಾವಣೆ: ಅಡ್ಡಮತದಾನ‌ ಮಾಡಿದವರ ಪತ್ತೆಗೆ‌ ಬಿಜೆಪಿಯಿಂದ ಸಮಿತಿ

ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಬಹುಮತವಿದ್ದರೂ ಸೋಲಿಗೆ ಕಾರಣವಾದ ಅಂಶಗಳ ಪತ್ತೆಗೆ ಬಿಜೆಪಿ ಸಮಿತಿಯನ್ನು ರಚಿಸಿದ್ದು,‌ ಇಂದು ಡಿಸಿಎಂ ಸಮ್ಮುಖದಲ್ಲಿ ಸಭೆಯನ್ನೂ ನಡೆಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ತಿಳಿಸಿದ್ದಾರೆ.

ಡಿಸಿಸಿ‌ ಬ್ಯಾಂಕ್ ಚುನಾವಣೆ: ಅಡ್ಡಮತದಾನ‌ ಮಾಡಿದವರ ಪತ್ತೆಗೆ‌ ಬಿಜೆಪಿಯಿಂದ ಸಮಿತಿ

ಬಾಗಲಕೋಟೆ:

ಡಿಸಿಸಿ ಬ್ಯಾಂಕ್ ನಲ್ಲಿ ಬಹುಮತವಿದ್ದರೂ ಸೋಲಿಗೆ ಕಾರಣವಾಗಿರುವ ಅಂಶಗಳ ಕುರಿತು ಚರ್ಚಿಸಿ ತಪ್ಪಿತಸ್ಥರ ವಿರುದ್ಧ, ಕ್ರಮಕೈಗೊಳ್ಳಲಾಗುವುದು ಅದಕ್ಕಾಗಿ ಸಮಿತಿಯನ್ನೂ ರಚಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮತವಿದ್ದರೂ ಸೋಲುಂಟಾಗಿದೆ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಡಿಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸೋಲಿನ ಕಾರಣವನ್ನು ಪರಾಮರ್ಶಿಸಲಾಗುವುದು ಎಂದು ಹೇಳಿದರು.

ಈ ಹಿಂದೆಯೂ ಹಲವು ಚುನಾವಣೆಗಳಲ್ಲ ಹೀಗಾದಾಗ ಯಾರ ಮೇಲೆ ಕ್ರಮವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅಂದಿನ ರಾಜಕೀಯ ಸ್ಥಿತಿಗತಿಗಳು ಹಾಗಿದ್ದವು.‌ಈಗ ಸಹಿಸುವ ಪ್ರಶ್ನೆಯೇ ಇಲ್ಲ ತಪ್ಪಿತಸ್ಥರ ಮೇಲೆ ಕ್ರಮ ನಿಶ್ಚಿತ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜು‌ ನಾಯ್ಕರ, ಮಲ್ಲಯ್ಯ ಮೂಗನೂರಮಠ ಇತರರು ಉಪಸ್ಥಿತರಿದ್ದರು.