ಸಾಫ್ಟ್‌ವೇರ್ ಬಳಸಿ ಮೋಸ್ಟ್ ವಾಂಟೆಡ್ ಕಳ್ಳನನ್ನು ಹಿಡಿದ ಬಾಗಲಕೋಟೆ ಪೊಲೀಸರು..!

ಬಾಗಲಕೋಟೆ ಪೊಲೀಸರು ತಂತ್ರಾಂಶ ಬಳಸಿ ಕಳನನ್ನು ಹಿಡಿದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ

ಸಾಫ್ಟ್‌ವೇರ್ ಬಳಸಿ ಮೋಸ್ಟ್ ವಾಂಟೆಡ್ ಕಳ್ಳನನ್ನು ಹಿಡಿದ ಬಾಗಲಕೋಟೆ ಪೊಲೀಸರು..!

ಬಾಗಲಕೋಟೆ: 
ಕಳೆದ ಆರು ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಶಹರ ಠಾಣೆಯ ಅಪರಾಧ ವಿಭಾಗದ ಪೊಲೀಸರು ತಂತ್ರಜ್ಞಾನ ಬಳಸಿ ಪತ್ತೆ ಹಚ್ಚಿರುವ ಅಪರೂಪದ ಘಟನೆ ನಡೆದಿದೆ. 
 ರೈಲು ನಿಲ್ದಾಣ ರಸ್ತೆ ನಿವಾಸಿ ಸಿಕಂದರ ಅಬ್ದುಲ್‌ಖಾದರ್ ಖಾಜಿ(೩೮) ಬಂಧಿತ ಆರೋಪಿ. ಎರಡು ಕಳ್ಳತನದ ಪ್ರಕರಣದಲ್ಲಿ ಈತ ಬಾಗಲಕೋಟೆ ಪೊಲೀಸರಿಗೆ ಬೇಕಾಗಿದ್ದ ಆದರೆ ಆತ ಪೊಲೀಸರ ನಜರಿಗೆ ಬಾರದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇತ್ತೀಚೆಗೆ ರಾತ್ರಿ ಬಸ್ ನಿಲ್ದಾಣ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವನನ್ನು ರಾತ್ರಿ ಗಸ್ತಿನಲ್ಲಿದ್ದ ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್.ದೊಡ್ಡಮನಿ ಅವರು ಆತನನ್ನು ವಿಚಾರಣೆಗೆ ಒಳಪಡಿಸಿದ್ದು, ಆತ ಯಾರು ಎಂಬುದನ್ನು ಪತ್ತೆ ಮಾಡಲು ಎಂ-ಸಿಸಿಟಿಎನ್‌ಎಸ್(ಅಪರಾಧ ಮತ್ತು ಅಪರಾಧಿ ಪತ್ತೆ ಜಾಲ ಮತ್ತು ವ್ಯವಸ್ಥೆ) ಎಂಬ ತಂತ್ರಾಂಶವನ್ನು ಬಳಸಿದಾಗ ಈತ ಪೊಲೀಸರಿಗೆ ಬೇಕಾದ ಖತರ್‌ನಾಕ್ ಕಳ್ಳ ಎಂಬುದು ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಏನಿದು ತಂತ್ರಾಂಶ:
ತಂತ್ರಜ್ಞಾನ ಬಳಕೆಗೆ ಪೊಲೀಸರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಅದರಲ್ಲಿ ಎಂಸಿಸಿಟಿಎನ್‌ಎಸ್ ಕೂಡ ಒಂದು. ದೇಶ, ರಾಜ್ಯದ ಯಾವುದೇ ಠಾಣೆಯಲ್ಲಿ ವ್ಯಕ್ತಿಯ ಹೆಸರಿನಲ್ಲಿ ಪ್ರಕರಣ ದಾಖಲಾಗಿದ್ದರೆ ಆತನ ಸಂಪೂರ್ಣ ವಿವರವನ್ನು ಈ ತಂತ್ರಾಂಶ ಒದಗಿಸುತ್ತದೆ. ಹೆಸರು, ವಿಳಾಸ ಹೀಗೆ ಸರ್ಚ್ ಇಂಜಿನ್‌ನಲ್ಲಿ ಏನೇ ಹುಡುಕಾಟ ಮಾಡಿದರೆ ಆರೋಪಿಯ ಇಡೀ ಜಾತಕವನ್ನೇ ಈ ತಂತ್ರಾAಶ ಪೊಲೀಸರ ಎದುರಿಗೆ ಬಿಚ್ಚಿಡುತ್ತದೆ. 
 ಕೇವಲ ಹೆಸರು, ವಿಳಾಸವಾಗಿದ್ದರೆ ಸಿಕ್ಕ ವ್ಯಕ್ತಿ ತಪ್ಪು ಹೇಳಿ ಯಾಮಾರಿಸಬಹುದು. ಆದರೆ ಯಾವದರಿಂದಲೂ ಪಾರಾಗದಂತೆ ಮತ್ತೊಂದು ಮಾರ್ಗವನ್ನೂ ಪೊಲೀಸರು ಕಂಡುಕೊಂಡಿದ್ದು, ವ್ಯಕ್ತಿ ನೀಡುವ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನ ಬೆರಳನ್ನು ಡಿಜಿಟಲ್ ಸ್ಕಾö್ಯನರ್‌ನಲ್ಲಿ ಇರಿಸಲಾಗುತ್ತದೆ. ಈಗ ಬಾಗಲಕೋಟೆಯಲ್ಲಿ ಬಂಧಿತವಾಗಿರುವ ಸಿಕಂದರ್ ಖಾಜಿಯ ವಿವರ ಸಿಕ್ಕಿದ್ದು ಸಹ ಬೆರಳಚ್ಚಿನ ಮೂಲಕವೇ.
 ಕಳ್ಳತನ, ದರೋಡೆ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಮೊದಲೇ ದಾಖಲಿಸಿಕೊಂಡಿರುತಾರೆ. ಅದರಲ್ಲಿ ಹೆಬ್ಬೆರಳಿನ ಗುರುತು ಪಡೆಯುವುದು ಸಹ ಒಂದು. ಎಲ್ಲಿಯೇ ತಲೆ ಮರೆಸಿಕೊಂಡು, ಅನುಮಾನಾಸ್ಪದವಾಗಿ ಸಿಕ್ಕಿ ಬಿದ್ದರೂ ಅವರ ಅವರ ಹೆಬ್ಬೆರಳು ಸ್ಕಾö್ಯನ್‌ಗೆ ಒಳಪಡಿಸುವುದರ ಮೂಲಕ ಆರೋಪಿಯ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಶಹರ ಠಾಣೆ ಸಿಪಿಐ ಎಂ.ನಾಗರೆಡ್ಡಿ  ತಿಳಿಸಿದರು. 
 ಪಾಸ್‌ಪೋರ್ಟ್ಗೆ ಅರ್ಜಿಗಳು ಬಂದಾಗ ವ್ಯಕ್ತಿಯ ಹಿನ್ನೆಲೆ ತಿಳಿದುಕೊಳ್ಳುವುದಕ್ಕೂ ಈ ತಂತ್ರಾಂಶ ಅತ್ಯಂತ ಸಹಾಯಕವಾಗುತ್ತಿದೆ. ಸಿಸಿಸಿಟಿಎನ್‌ಎಸ್ ಇತ್ತೀಚೆಗಷ್ಟೇ ಪರಿಚಯವಾಗಿದ್ದು, ಸಿಮ್ ಕಾರ್ಡ್ ನೀಡುವಾಗ ಹೆಬ್ಬೆರಳಿನ ಗುರುತು ಪಡೆಯಲು ಬಳಸುವ ಯಂತ್ರದ ರೀತಿಯ ಸ್ಕ್ಯಾನರ್ ಅನ್ನು ಪೊಲೀಸರಿಗೆ ಒದಗಿಸಲಾಗಿದೆ. ಯಾವುದೇ ಅನುಮಾನಾಸ್ಪದ ವ್ಯಕ್ತಿ ಸಿಕ್ಕಾಗಲೂ ಸುಲಭವಾಗಿ ಆತನ ಜಾತಕವನ್ನು ಪಡೆದುಕೊಳ್ಳುವಲ್ಲಿ ಇದು ಸಹಕಾರಿಯಾಗುತ್ತಿದೆ ಎಂದು ವಿವರಿಸಿದರು.