ಲಾರಿ ಢಿಕ್ಕಿ: ಬಸ್‌ನಲ್ಲಿದ್ದ ಕಾಲೇಜು ವಿದ್ಯಾರ್ಥಿ ಸಾವು...!

ಲಾರಿ ಢಿಕ್ಕಿ: ಬಸ್‌ನಲ್ಲಿದ್ದ ಕಾಲೇಜು ವಿದ್ಯಾರ್ಥಿ ಸಾವು...!

ಬಾಗಲಕೋಟೆ:
ಗದ್ದನಕೇರಿ ಕ್ರಾಸ್ ಬಳಿಯಿಂದ ಬಾಗಲಕೋಟೆಯ ಕಡೆಗೆ ಆಗಮಿಸುತ್ತಿದ್ದ ಬಸ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾಲೇಜಿಗೆ ಹೊರಟಿದ್ದ ಓರ್ವ ವಿದ್ಯಾರ್ಥಿ  ಸ್ಥಳದಲ್ಲೆ ಮೃತಪಟ್ಟಿದ್ದರೆ, ಇನ್ನುಳಿದವರು  ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿದೆ.

ಇಟ್ಟಗಿ ಭೀಮವ್ವ ದೇಗುಲದ ಬಳಿ ಈ ಅಪಘಾತ ಸಂಭವಿಸಿದ್ದು ರಭಸದಲಿ ಬಂದ ಲಾರಿ ಚಾಲಕ ಹಿಂದಿನಿಂದ ಅಮಲಝರಿ- ಬಾಗಲಕೋಟೆ ಬಸ್ ಗೆ ಗುದ್ದಿದ್ದಾನೆ. ಇದರಿಂದ ಬಸ್ ರಸ್ತೆ ಬಿಟ್ಟು ಕೆಳಗೆ ಇಳದಿದ್ದು, ಲಾರಿ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಮೃತ ವಿದ್ಯಾರ್ಥಿಯನ್ನು ಅರಕೇರಿ ಗ್ರಾಮದ ರಾಹುಲ್ ಪಾಟೀಲ ಎಂದು ಗುರುತಿಸಲಾಗಿದೆ.

ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಂಬುಲೆನ್ಸ್ ಗೆ ಮಾಹಿತಿ ‌ನೀಡಿದ್ದು, ಬಸ್ ನಲ್ಲಿದವರನ್ನು ಹೊರಕ್ಕೆ ತರುವ ಕೆಲಸ ಮಾಡಿದ್ದಾರೆ.

ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಓರ್ವ ಬಾಲಕ ಜೀವಬಿಟ್ಟಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೃತಪಟ್ಟ ವಿದ್ಯಾರ್ಥಿಯ ಮುಖ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮುಖದ ತುಂಡುಗಳು ರಸ್ತೆಯಲ್ಲಿ ತುಂಡಾಗಿ ಬಿದ್ದಿವೆ. ಮೃತ ರಾಹುಲ್‌ ಪಾಟೀಲ ಶಂಕ್ರಪ್ಪ ಸಕ್ರಿ ಕಾಲೇಜಿನ‌ ದ್ವಿತೀಯ ಪಿಯು ಕಲಾ ವಿದ್ಯಾರ್ಥಿ ಎಂದು ಹೇಳಲಾಗಿದೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ.