ಹಿಜಾಬ್ ವಿವಾದ: ಶಾಲೆಗಳಿಗೆ ಜಿಲ್ಲೆಯಲ್ಲಿ ಹೊಸ ರೂಲ್ಸ್ ಜಾರಿ ಮಾಡಿ ಡಿಸಿ ಆದೇಶ

ಫೆ.೧೨ರಿಂದ ಮುಂದಿನ ಆದೇಶದವರೆಗೆ ಶಾಲಾ-ಕಾಲೇಜುಗಳ ೨೦೦ ಮೀಟರ್ ವರೆಗೆ ಹಲವು ನಿರ್ಬಂಧಗಳನ್ನು ವಿಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಹಿಜಾಬ್ ವಿವಾದ: ಶಾಲೆಗಳಿಗೆ ಜಿಲ್ಲೆಯಲ್ಲಿ ಹೊಸ ರೂಲ್ಸ್ ಜಾರಿ ಮಾಡಿ ಡಿಸಿ ಆದೇಶ


ಬಾಗಲಕೋಟೆ:
ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆ ಫೆ.೧೨ ರಿಂದ  ಶಾಲಾ, ಕಾಲೇಜುಗಳ ಆವರಣದಿಂದ ೨೦೦ ಮೀಟರ್ ವರೆಗೆ ಕೆಲವು ನಿರ್ಬಂಧಗಳನ್ನು ವಿಧಿಸಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಶಾಲಾ ಕಾಲೇಜುಗಳ ಆವರಣದ ಬಳಿ ಪ್ರತಿಭಟನೆ, ಗುಂಪುಗಳು ಸೇರದಂತೆ ಆದೇಶಿಸಿಲಾಗಿದ್ದು, ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ಹೊರತುಪಡಿಸಿ ಇತರ ಯಾವುದೇ ವ್ಯಕ್ತಿಗಳು ಶಾಲೆಯ ೨೦೦ ಮೀಟರ್ ಆವರಣ ಪ್ರವೇಶಿಸುವಂತಿಲ್ಲ ಎಂದು ನಿರ್ದೇಶಿಸಲಾಗಿದೆ.