ಹದಿನಾರು ವರ್ಷದ ನಂತರ ಬಾಗಲಕೋಟೆ ಗ್ರಾಮದೇವತೆಗೆ ಜಾತ್ರೆ..!
ನಾಡನುಡಿ ನ್ಯೂಸ್
ಬಾಗಲಕೋಟೆ:
ಹದಿನಾರು ವರ್ಷದ ನಂತರ ನಗರದ ಕಿಲ್ಲಾದಲ್ಲಿರುವ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ ನಡೆಸಲು ಹಿರಿಯರು ತೀರ್ಮಾನಿಸಿದ್ದಾರೆ.
ಮಳೆ-ಬೆಳೆ,ಕೊರೊನಾದಂಥ ಮಹಾಮಾರಿಯನ್ನು ತೊಲಗಿಸಲು ಗ್ರಾಮದೇವತೆಯ ಜಾತ್ರೆಯನ್ನೂ ಮತ್ತೆ ಆರಂಭಿಸಿ ಮುಂದವರಿಸಿಕೊಂಡು ಹೋಗಲು ಚಿಂತನೆ ನಡೆಸಲಾಗುತ್ತಿದೆ.ಅದಕ್ಕಾಗಿ ಒಂದು ಬಾರಿ ಸಭೆ ನಡೆಸಲಾಗಿದ್ದು, ಮಾ.೧೬ರಂದು ಎರಡನೇ ಸುತ್ತಿನ ಸಭೆ ನಡೆಯಲಿದೆ. ಅಲ್ಲಿಯೇ ಜಾತ್ರೆಯ ಸ್ವರೂಪ ತೀರ್ಮಾನವಾಗಲಿದೆ.
ಕಿಲ್ಲಾ ಮಧ್ಯಭಾಗದಲ್ಲಿ ದ್ಯಾಮವ್ವನ ದೇವಸ್ಥಾನವಿದ್ದು, ಬಾಗಲಕೋಟೆಯ ಗ್ರಾಮದೇವತೆ ಎಂಬುದು ಇಲ್ಲಿನ ನಂಬಿಕೆಯಾಗಿದೆ. ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಭೇಟಿ ನೀಡುತ್ತಾರಾದರೂ ಜಾತ್ರೆ ಆಚರಣೆ ನಿಂತು ಹೋಗಿತ್ತು. ಅದಕ್ಕೆ ಮರು ಜೀವ ನೀಡಲು ಕಿಲ್ಲಾ ಹಾಗೂ ಹಳಪೇಟೆ ಭಾಗದ ಹಿರಿಯರು ತೀರ್ಮಾನಿಸಿದ್ದಾರೆ.