PALESTINE FLAG: ಕಿಲ್ಲಾದಲ್ಲಿ ಪ್ಯಾಲೆಸ್ಥೈನ್ ಧ್ವಜ ಹಾರಾಟ: 6 ಜನರ ವಿರುದ್ಧ ಪ್ರಕರಣ ದಾಖಲು
ಬಾಗಲಕೋಟೆ: ನಗರದ ಕಿಲ್ಲಾ ಓಣಿಯ ಚಾವಡಿ ಮುಂಭಾಗ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲಸ್ಥೈನ್ ಧ್ವಜ ಹಾರಾಟಕ್ಕೆ ಸಂಬಂಧಿಸಿದಂತೆ ಶಹರ ಠಾಣೆಯಲ್ಲಿ ೬ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೆ.೧೬ರಂದು ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಯುವಕನೋರ್ವ ಪ್ಯಾಲೆಸ್ಥೈನ್ ಧ್ವಜ ಹಾರಾಟ ನಡೆಸಿದ್ದ, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೆರವಣಿಗೆ ಆಯೋಜಕರು ಸೇರಿದಂತೆ ೬ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೀರ್ ಕಮಿಟಿ ಅಧ್ಯಕ್ಷ ಜಿ.ಎಚ್.ಡಾಲಾಯತ್, ಅಲ್ತಾಫ್ ಬೇನೂರ, ರಫೀಕ್ ಹನುಮಸಾಗರ, ಯೂಸುಫ್ ಬಿಳೇಕುದರಿ, ಮೊಹಮ್ಮದಸಾಬ್ ನದಾಫ್, ದಾದಾಪೀರ್ ಝಂಡೆ ಸೇರಿ ಒಟ್ಟು ೬ ಜನರ ವಿರುದ್ಧ ದೂರು ದಾಖಲಾಗಿದೆ. ಧ್ವಜ ಹಾರಾಟ ನಡೆಸಿದ ಯುವಕನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದು, ಶಹರ ಠಾಣೆ ಸಿಪಿಐ ಗುರುನಾಥ ಚವಾಣ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ.