ಮೈಕೈ ನೋವಿಗೆ ಕೊಡಲಿಪೆಟ್ಟು: ಪೂಜಾರಿ ಅಂದರ್

ಮೈಕೈ ನೋವಿಗೆ ಕೊಡಲಿಪೆಟ್ಟು: ಪೂಜಾರಿ ಅಂದರ್
ಬಾಗಲಕೋಟೆ:ಮೈಕೈ ನೋವು ಕಡಿಮೆ ಮಾಡುತ್ತೇನೆ ಎಂದು ಭಂಡಾರ ಹಚ್ಚಿ ಕೊಡಲಿ ಏಟು ನೀಡುತ್ತಿದ್ದ ಪೂಜಾರಿಯೊಬ್ಬ ಪೊಲೀಸ್ ಅತಿಥಿಯಾಗಿದ್ದಾನೆ. 
ಮುಧೋಳ ತಾಲೂಕಿನ ಮೆಟ್ಟಗುಡ್ಡ ಗ್ರಾಮದ ಕಾಶಿಲಿಂಗೇಶ್ವರ ದೇವಸ್ಥಾನದ ಜಕ್ಕಪ್ಪ ಗಡ್ಡದ ಬಂಧಿತ ವ್ಯಕ್ತಿ. ಮೂಢನಂಬಿಕೆ ನಿಷೇಧ ಕಾಯ್ದೆಯಡಿಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದು, ಲೋಕಾಪುರ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಅಮರನಾಥ ರೆಡ್ಡಿ ತಿಳಿಸಿದ್ದಾರೆ. ಈತ ಮೈಕೈ ನೋವು ಎಂದು ಬಂದವರಿಗೆ ಭಂಡಾರ ಹಚ್ಚಿ ನಂತರ ಕೊಡಲಿಯಿಂದ ಪೆಟ್ಟು ಕೊಡುತ್ತಿದ್ದ, ಆಗ ಗಾಯ, ನೋವುಗಳು ವಾಸಿಯಾಗುತ್ತದೆ ಎಂದು ಭಕ್ತರು ನಂಬಿದ್ದರು. ಈತನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈಗ ಪೊಲೀಸ್ ಅತಿಥಿಯಾಗಿದ್ದಾನೆ.