ಮತ್ತಷ್ಟು ಜನಸ್ನೇಹಿಯಾದ ಜಿಲ್ಲಾ ಪೊಲೀಸ್ : ಜನರನ್ನು ತಲುಪಲು ಬಂತು ಹೊಸ website

ಮತ್ತಷ್ಟು ಜನಸ್ನೇಹಿಯಾದ ಜಿಲ್ಲಾ ಪೊಲೀಸ್ : ಜನರನ್ನು ತಲುಪಲು ಬಂತು ಹೊಸ website

ನಾಡನುಡಿ ನ್ಯೂಸ್
ಬಾಗಲಕೋಟೆ
ತಂತ್ರಜ್ಞಾನ ಬಳಸಿಕೊಂಡು ಮತ್ತಷ್ಟ ಜನಸ್ನೇಹಿ ಆಗಲು ಮುಂದಾಗಿರುವ ಬಾಗಲಕೋಟೆ ಜಿಲ್ಲಾ ಪೊಲೀಸ್ ಅದಕ್ಕಾಗಿ ನೂತನ ವೆಬ್ ಸೈಟ್ ಅನ್ನು ಬಿಡುಗಡೆಗೊಳಿಸಿದೆ.

ಸಾರ್ವಜನಿಕ ಸೇವೆಗಳು,‌ಜಿಲ್ಲೆಯಲ್ಲಿ ನಡೆದ ಅಪರಾಧ ಪ್ರಕರಣಗಳ ವಿವರ, ಪಾಸ್ ಪೋರ್ಟ್,ಇ- ಕೋರ್ಟ್ ಸೇರಿ‌ ಹಲವು ಸೇವೆಗಳು ಈ ವೆಬ್ ಸೈಟ್ ನಲ್ಲಿ ಲಭ್ಯವಿವೆ.

ಜನಸ್ನೇಹಿ ಆಗುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿಕೊಂಡು ಈ ಹೆಜ್ಜೆಯನ್ನು ಇಡಲಾಗುತ್ತಿದೆ. ಸಾರ್ವಜನಿಕರು ವೆಬ್ ಸೈಟ್ ಬಳಕೆಗೆ ಮುಂದಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಲೋಕೇಶ ಜಗಲಾಸರ್ ಮನವಿ ಮಾಡಿದ್ದಾರೆ.

ಹಿರಿಯ ನಾಗರಿಕರು, ಮಹಿಳಾ ಸಹಾಯವಾಣಿಗಳನ್ನೂ ನೂತನ ವೆಬ್ ಸೈಟ್ ಮೂಲಕ ತಲುಪಬಹುದಾಗಿದ್ದು, ಯಾವುದೇ ಪ್ರಕರಣದಲ್ಲಿ ಸಂಬಂಧಪಟ್ಟವರು ಎಫ್ ಐಆರ್ ಯನ್ನು ಸಹ ಪಡೆಯಬಹುದಾಗಿದೆ.

ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇರುವುದರಿಂದ ವೆಬ್ ಸೈಟ್ ಬಳಕೆ ಮಹತ್ವ ಪಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆಯಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಿಬ್ಬಂದಿ ಕ್ರಿಯಾಶೀಲರಾಗಿದ್ದು, ವೆಬ್ ಸೈಟ್ ಮೂಲಕವೂ ಜನರಿಗೆ ಇಲಾಖೆ ಸೇವೆ ಒದಗಿಸಲು ಮುಂದಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ