ಬಾಗಲಕೋಟೆಯಲ್ಲಿ ಮಧ್ಯಾಹ್ನ ಲಾಕ್‌ಡೌನ್‌ನ ಗೊಂದಲ

*ಕೆಲವೆಡೆ ಒತ್ತಾಯ ಪೂರ್ವಕ ಬಂದ್ * ಇನ್ನೂಕೆಲವೆಡೆ ಸಂಜೆವರೆಗೂ ನಡೆದ ವಹಿವಾಟು 

   ಬಾಗಲಕೋಟೆಯಲ್ಲಿ ಮಧ್ಯಾಹ್ನ ಲಾಕ್‌ಡೌನ್‌ನ ಗೊಂದಲ

      


ಬಾಗಲಕೋಟೆ ಜು.೨೨:
ಜಿಲ್ಲಾದ್ಯಂತ ಮಧ್ಯಾಹ್ನ ಲಾಕ್‌ಡೌನ್ ಎಂಬ ವಿಚಾರ ಹಲವು ಗೊಂದಲಗಳನ್ನು ಹುಟ್ಟುಹಾಕಿದೆ. ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ಹಲವೆಡೆ ಪೊಲೀಸರೇ ಅಂಗಡಿ-ಮುAಗಟ್ಟುಗಳನ್ನು ಬಂದ್ ಮಾಡಿಸಿದ್ದರೆ, ಇನ್ನುಳಿದ ಕಡೆಗಳಲ್ಲಿ ಮಾರುಕಟ್ಟೆ ಈ ಮೊದಲಿನಂತೆ ಸಂಜೆವರೆಗೆ ನಡೆದಿದೆ. 
 ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ತಾಲೂಕಾಡಳಿತಗಳು ವರ್ತಕರ ಮನವೋಲಿಸಿ ಸ್ವಯಂ ಪ್ರೇರಣೆಯಿಂದ ಬಂದ್ ಮಾಡುವಂತೆ ಮಾತುಕತೆ ನಡೆಸಿವೆ ಅದರಂತೆ ಜಮಖಂಡಿ, ಮುಧೋಳ, ಮಹಾಲಿಂಗಪುರ, ಗದ್ದನಕೇರಿ ಕ್ರಾಸ್ ಸೇರಿ ಅನೇಕ ಕಡೆಗಳಲ್ಲಿ ಮಧ್ಯಾಹ್ನ ಊರುಗಳು ಬಂದಾಗುತ್ತಿವೆ. ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ಮಂಗಳವಾರ ವರ್ತಕರ ಸಭೆ ನಡೆಸಿರುವುದಾಗಿ ತಿಳಿಸಿರುವ ಉಪವಿಭಾಗಾಧಿಕಾರಿ ಗಂಗಪ್ಪ ಹಾಗೂ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಅವರು ಇಲ್ಲಿಯೂ ಅಂಗಡಿ-ಮುAಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಮುಚ್ಚಬೇಕು. ಇದಕ್ಕೆ ವರ್ತಕರು ಒಪ್ಪಿದ್ದಾರೆ ಎಂದು ತಿಳಿಸಿದ್ದರು. 
 ಇದರಂತೆ ಬುಧವಾರ ಮಧ್ಯಾಹ್ನವೇ ಪೊಲೀಸರು ಹಳೆ ಕಿರಾಣಾ ಬಜಾರ್, ಎಂಜಿ ರಸ್ತೆ, ಅಡತ್ ಬಜಾರ್, ವಲ್ಲಭಭಾಯ್ ಚೌಕ್, ಕೆರೂಡಿ ಆಸ್ಪತ್ರೆ ಬಳಿಯ ಮಳಿಗೆಗಳನ್ನು ಮುಚ್ಚಿಸಲು ಮುಂದಾದರು. ಕೆಲ ವ್ಯಾಪಾರಸ್ಥರು ಇದನ್ನು ವಿರೋಧಿಸಿದರು. ಪೊಲೀಸರೊಂದಿಗೆ ವಾಗ್ವಾದವೂ ನಡೆಯಿತು. 
 ಆದರೆ ಬಸ್ ನಿಲ್ದಾಣ ರಸ್ತೆ, ವಿದ್ಯಾಗಿರಿ, ನವನಗರಗಳಲ್ಲಿ ಸಂಜೆವರೆಗೂ ಎಂದಿನAತೆ ಅಂಗಡಿ-ಮುAಗಟ್ಟುಗಳು ತೆರೆದಿದ್ದು, ಪೊಲೀಸರು ಯಾವುದೇ ಸೂಚನೆ ನೀಡದ ಕಾರಣ ಎಂದಿನAತೆ ಸಂಜೆ ೬ ಗಂಟೆವರೆಗೆ ವಹಿವಾಟು ನಡೆಯಿತು. 
 ಹಳೆ ಬಾಗಲಕೋಟೆಯಲ್ಲಿ ಜನಸಂದಣಿ ಉಂಟಾಗುವುದರಿAದ ಇಂಥದೊAದು ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಭಾಗಶಃ ಮಾರುಕಟ್ಟೆಯನ್ನು ಮುಚ್ಚಿಸಿ ಮತ್ತೊಂದು ಕಡೆ ತೆರೆದಿದ್ದರೆ ಅಲ್ಲೂ ಜನಸ್ತೋಮವಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಇದು ಅವಶ್ಯಕತೆಯಿಲ್ಲ ಸಂಜೆ ೬ ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಹಲವು ವ್ಯಾಪಾರಸ್ಥರು ಹೇಳಿದ್ದಾರೆ.
 ಮಧ್ಯಾಹ್ನದ ಲಾಕ್‌ಡೌನ್ ಸಂಬAಧ ಈ ಹಿಂದೆ ಆರು ವ್ಯಾಪಾರಸ್ಥ ಸಂಘಟನೆಗಳು ಸಹ ತೀರ್ಮಾನಕೈಗೊಂಡಿದ್ದವು. ಆಗಲೂ ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಈ ಬಾರಿಯೂ ಪರ ಹಾಗೂ ವಿರೋಧದ ಚರ್ಚೆಗಳು ನಡೆದಿದ್ದು, ಕೆಲವರು ಈ ಆದೇಶವನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ವಿರೋಧಿಸುತ್ತಿದ್ದಾರೆ. 

ವರ್ತಕರಿಂದ ಮನವಿ:ಧ್ಯಾಹ್ನದ ಲಾಕ್‌ಡೌನ್ ಹಿಂಪಡೆಯಬೇಕು. ಹಿಂದಿನAತೆ ಸಂಜವರೆಗಿನ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರಿ ಕೆಲ ವರ್ತಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ರಾಜ್ಯಾದ್ಯಂತ ೮ ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಮುಖ್ಯಮಂತ್ರಿಗಳು ಅವಕಾಶ ಕಲ್ಪಿಸಿರುವಾಗ ಬಾಗಲಕೋಟೆಯಲ್ಲಿ ಮಾತ್ರ ಇಂಥದೊAದು ಆದೇಶ ಅಗತ್ಯವಾಗಿಲ್ಲ. ಅಂಗಡಿ ಬಾಡಿಕೆ, ಕೆಲಸಗಾರರ ಸಂಬಳ ನೀಡುವುದು ಸಹ ಕಷ್ಟದ ಸ್ಥಿತಿ ಎನ್ನುವಂತಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ಲಾಕ್‌ಡೌನ್ ಮಾತ್ರವೇ ಮುಂದವರಿಸಬೇಕೆAದು ವ್ಯಾಪಾರಸ್ಥರಾದ ಮಹಾಂತೇಶ ಚೊಳಚಗುಡ್ಡ, ರವೀಂದ್ರ ಶೆಟ್ಟಿ, ಅಬ್ದುಲ್ ಜಮಖಂಡಿ, ಪ್ರದೀಪ್ ಬಾರಕೇರ ಮತ್ತಿತರರು ಮನವಿ ಮಾಡಿದ್ದಾರೆ. 

 ಕಾಂಗ್ರೆಸ್ ಆಕ್ಷೇಪ :ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ಲಾಕ್‌ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದ ನಂತರವೂ ಬಾಗಲಕೋಟೆಯಲ್ಲಿ ಮಧ್ಯಾಹ್ನ ೨ ಗಂಟೆವರೆಗೆ ಮಾರುಕಟ್ಟೆ ತೆರೆದಿರಲಿದೆ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇದನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಲಿಕ್ಕರ್ ಮಾಲೀಕರ ಸಂಘದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ನಿಂಗನಗೌಡ ಪಾಟೀಲ ಹಾಗೂ ನಗರಸಭೆ ಮಾಜಿ ಸದಸ್ಯ ಗೋವಿಂದರಾಜ ಬಳ್ಳಾರಿ ಎಚ್ಚರಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಸಂಜೆವರೆಗೂ ಮಾರಾಟಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.