ರಕ್ಷಣೆ ಕೋರಿ ಬಂದ ಜೋಡಿಹಕ್ಕಿ ಮೇಲೆ ಹಲ್ಲೆ
ನಾಡನುಡಿ ನ್ಯೂಸ್
ಬಾಗಲಕೋಟೆ ಫೆ.೨೬:
ಪ್ರೀತಿಸಿ ಮದುವೆಯಾಗಿ ಕುಟುಂಬದವರಿಂದ ರಕ್ಷಣೆ ಕೋರಲು ಎಸ್ ಪಿ ಕಚೇರಿಗೆ ಆಗಮಿಸಿದ ನವದಂಪತಿಗಳ ಮೇಲೆ ಬಾಗಲಕೋಟೆಯಲ್ಲಿ ಪೊಲೀಸರ ಎದುರೇ ಹಲ್ಲೆ ನಡೆದಿದೆ.
ನವನಗರ ನಿವಾಸಿಗಳಾದ ನವೀನ ಭಜಂತ್ರಿ(೨೪) ಹಾಗೂ ಮಹಜಬಿನ್ ಮಂಟೂರ(೧೯) ಪರಸ್ಪರ ಪ್ರೀತಿಸಿದ ಹುಡುಗ ಹುಡಗಿ.ಈ ಇಬ್ಬರು ಕಳೆದ ೧೦ ದಿನಗಳ ಹಿಂದೆ ಮನೆಯಿಂದ ನಾಪತ್ತೆ ಆಗಿದ್ದು, ದೇವಸ್ಥಾನದಲ್ಲಿ ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ.
ಕಳೆದ ಏಳೆಂಟು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಯುವತಿಯ ಮನೆಯವರಿಗೆ ಈ ವಿಷಯ ತಿಳಿದು ಆಕೆ ಮದುವೆಗೆ ಸಿದ್ಧತೆ ನಡೆಸಿದ್ದರು.
ಫೆ.೧೬ರಂದು ಮನೆ ಬಿಟ್ಟು ಬಂದಿದ್ದ ಜೋಡಿ ದೇವಸ್ಥಾನವೊಂದರಲ್ಲಿ ಮದುವೆ ಆಗಿದ್ದರು.
ಯುವತಿಯ ಮನೆ ಅವರಿಂದ ಬೆದರಿಕೆ ಹಿನ್ನೆಲೆ ಇಬ್ಬರೂ ರಕ್ಷಣೆ ಕೋರಿ ಶುಕ್ರವಾರ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು. ಎಸ್ ಪಿ ಅವರನ್ನು ಭೇಟಿಯಾಗಲು ಅವರ ಕೊಠಡಿ ಹೊರಗೆ ಕುಳಿತಾಗಲೇ ಯುವತಿಯ ಮನೆಯವರು ಆಗಮಿಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಿಬ್ಬಂದಿ ಕುಟುಂಬಸ್ಥರನ್ನು ತಡೆದು. ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ