ಬಾಗಲಕೋಟೆ: ಅಧಿಕ ಮಾಸದ ಜಿಜ್ಞಾಸೆ ಗಣೇಶ ಚತುರ್ಥಿಗೂ ಮುಂದವರಿದಿದೆ.ಕೋಟೆನಗರಿಯಲ್ಲಿ ಸೆ.೧೯ರಂದು ಸಾರ್ವಜನಿಕ ಮಂಡಳಿಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ.
ಸೆ.೧೮ ಮತ್ತು ಸೆ.೧೯ ಎರಡರಲ್ಲಿ ಯಾವ ದಿನ ಗಣೇಶ ಪ್ರತಿಷ್ಠಾಪನೆ ಎಂಬ ಗೊಂದಲ ಮುಂದವರಿದಿದ್ದು, ಕೆಲ ಆಧ್ಯಾತ್ಮಿಕ ತಜ್ಞರು ಸೆ.೧೯ ರಂದು ಚತುರ್ಥಿ ಸೇರುವುದರಿಂದ ಅದೇ ದಿನ ಸೂಕ್ತ ಎಂಬ ಸಲಹೆ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಮಂಡಳಿಗಳು ಸೆ.೧೯ ರಂದು ಪ್ರತಿಷ್ಠಾಪಿಸಬೇಕೆಂದು ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಮೇಲ್ನಾಡ ಕರೆ ನೀಡಿದ್ದಾರೆ.
ಈ ನಡುವೆ ಮನೆಗಳಲ್ಲಿ ಸೆ.೧೮ ರಂದು ಗಣೇಶ ಪ್ರತಿಷ್ಠಾಪನೆಗೊಳ್ಳಲಿದ್ದು, ಹಬ್ಬಕ್ಕೆ ರಜೆ ಯಾವ ದಿನದಂದ ಕೊಡಬೇಕೆಂಬುದು ಸರ್ಕಾರದಿಂದ ಈವರೆಗೆ ನಿರ್ಧಾರವಾದಂತ್ತಿಲ್ಲ.
(ಕಮತಗಿಯ ಗಣೇಶ ಕುಬೇರಪ್ಪ ಚಿತ್ರಗಾರ ಗಣೇಶೋತ್ಸವ ಕುರಿತು ತಮ್ಮ ಅಭಿಪ್ರಾಯ ಮಂಡಿಸಿರುವುದು)
ಜಿಲ್ಲೆಯಲ್ಲಿ ೨೨೦೦ ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೊಳ್ಳಲಿದ್ದು, ಬಹುತೇಕ ಸೆ.೧೯ರಂದೇ ಗಣೇಶ ಪ್ರತಿಷ್ಠಾಪನೆ ಆಗಲಿದೆ. ಈ ಬಾರಿ ಅಧಿಕ ಮಾಸ ಬಂದಿರುವುದರಿAದ ಎಲ್ಲ ಹಬ್ಬಗಳ ಆಚರಣೆ ಬಗ್ಗೆ ಜಿಜ್ಞಾಸೆ ಮುಂದವರಿದಿತ್ತು. ಅದು ಗಣೇಶ ಹಬ್ಬಕ್ಕೂ ವಿಸ್ತಾರಗೊಂಡಿದೆ.