ಹಯಗ್ರಿವ ರುಚಿ ಸವಿದವರೇ ಬಲ್ಲರು...!
ನಾಡುನುಡಿ ದೀಪಾವಳಿ ಪಾಕಶಾಲೆಯ ಐದನೇ ದಿನದ ರೆಸಸಿಗಳು ಇಲ್ಲಿದೆ. ನಾವು ನೀಡಿರುವ ರೆಸಿಪಿಗಳು ನಿಮ್ಮ ಮನಗೆದ್ದಿರುವುದರಲ್ಲಿ ಸಂದೇಹವೇ ಇಲ್ಲ..ಇನ್ನೂ ನಮ್ಮ ಅಂಕಣ ಮುಂದವರಿಯುತ್ತಿದ್ದು, ಅವುಗಳನ್ನೂ ಮನೆಯಲ್ಲಿ ತಯಾರು ಮಾಡಿ ಸಂಭ್ರಮಿಸಿ
ಹಯಗ್ರೀವ
ಸಾಮಗ್ರಿ:
ಕಡಲೆಬೇಳೆ - 1 ಕಪ್, ಬೆಲ್ಲ - 1 1/4 ಕಪ್, ಏಲಕ್ಕಿ ಪುಡಿ 1 ಚಮಚ, ಗೋಡಂಬಿ, ದ್ರಾಕ್ಷಿ ಸ್ವಲ್ಪ, ತುಪ್ಪ 1/4 ಕಪ್,
ಒಣ ಕೊಬ್ಬರಿ 1/4 ಕಪ್, ಪಚ್ಚ ಕರ್ಪೂರ ಚಿಟಿಕೆ
ವಿಧಾನ:
ಮೊದಲು ಕಡಲೆಬೇಳೆ 4 ಘಂಟೆ ನೆನೆಸಿ, ಪಾತ್ರೆಯಲ್ಲಿ ಕಡಲೆಬೇಳೆ ಮೂರರಷ್ಟು ನೀರು ಹಾಕಿ ಬೆಯೋಕೆ ಇಡಿ. ಬೇಳೆ ಮುಕ್ಕಾಲು ಬೆಂದ ನಂತರ ನೀರು ಶೋಧಿಸಿ ಕಡಲೆಬೇಳೆ ನ ಅರ್ಧಭಾಗ ಮೊಗಚಿ. ಶೋಧಿಸಿದ ನೀರಿಗೆ ಪುಡಿ ಮಾಡಿದ ಬೆಲ್ಲ ಹಾಕಿ ಕರಗಲು ಬಿಟ್ಟು ಮತ್ತೆ ಶೋಧಿಸಿ ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಸಿ. ಪಾಕ ಸ್ವಲ್ಪ ಗಟ್ಟಿ ಆಗುತ್ತಿದ್ದಂತೆ ಅದಕ್ಕೆ ಬೇಯಿಸಿ ಮೊಗಚಿದ ಕಡ್ಲೆಬೇಳೆ, ಕೊಬ್ಬರಿ ಹಾಕಿ ಕಲಸಿ ಒಂದು ಚಮಚ ತುಪ್ಪ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ, ಪಚ್ಚ ಕರ್ಪೂರ ಎಲ್ಲ ಹಾಕಿ ಚೆನ್ನಾಗಿ ಕಲಸಿ 5 ನಿಮಿಷ ಕುದಿಸಿದರೆ ಹಯಗ್ರೀವ ಸಿದ್ಧ.
ಕರಾಚಿ ಹಲ್ವಾ
ಸಾಮಗ್ರಿ: ಸಕ್ಕರೆ ೨ ಕಪ್, ಕಾರ್ನ್ ಫ್ಲೋರ್ 2 ಕಪ್, ತುಪ್ಪ 4 ಚಮಚ, ಕೇಸರಿ ಫುಡ್ ಕಲರ್, ನೀರು.
ವಿಧಾನ:
ಒಂದು ಪ್ಯಾನ್ ಗೆ 2 ಕಪ್ ಸಕ್ಕರೆ, 1 ಕಪ್ ನೀರನ್ನು ಹಾಕಿ ಕುದಿಯಲು ಬಿಡಿ. ಒಂದು ಕಪ್ ಕಾರ್ನ್ ಫ್ಲೋರ್ ಗೆ ಒಂದೂವರೆ ಕಪ್ ನೀರನ್ನು ಹಾಕಿ ಗಂಟಿಲ್ಲದಂತೆ ಮಿಕ್ಸ್ ಮಾಡಿ, ಸಕ್ಕರೆ ನೀರು ಕುದಿಸಿದ ಒಂದು ಎಳೆ ಪಾಕ ಬರುತ್ತಿದ್ದಂತೆ ಕಾರ್ನ್_ಫ್ಲೋರ್ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿ ಕೈ ಬಿಡದಂತೆ ಮಿಕ್ಸ್ ಮಾಡುತ್ತಿರಿ. ಮಧ್ಯ ಮಧ್ಯ ಒಂದೊಂದು ದೊಡ್ಡ ಚಮಚ ತುಪ್ಪವನ್ನು ಹಾಕುತ್ತಿರಿ. ನಂತರ ಸ್ವಲ್ಪ ಕೇಸರಿ ಬಣ್ಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಾದಾಮಿ ಗೋಡಂಬಿಯನ್ನು ಮಿಕ್ಸಿ ಜಾರಿನಲ್ಲಿ ಪುಡಿ ಮಾಡಿಕೊಂಡು ಬೇಯುತ್ತಿರುವ ಮಿಶ್ರಣಕ್ಕೆ ಹಾಕಿ, ಏಲಕ್ಕಿ ಪುಡಿ ಸೇರಿಸಿ ತಳ ಬಿಡುವವರೆಗೂ ಮಿಕ್ಸ್ ಮಾಡುತ್ತಿರಿ. ನಂತರ ಒಂದು ತಟ್ಟೆಗೆ ತುಪ್ಪವನ್ನು ಸವರಿ ಮಿಶ್ರಣವನ್ನು ಹಾಕಿ ಮೇಲೆ ಮತ್ತಷ್ಟು ಗೋಡಂಬಿ ಬಾದಾಮಿ ಚೂರುಗಳನ್ನು ಉದುರಿಸಿ ಸ್ವಲ್ಪ ಬಿಸಿ ಇರುವಾಗಲೇ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ಒಂದು ಗಂಟೆ ಫ್ರಿಡ್ಜ್ ಅಲ್ಲಿ ಇಟ್ಟು ಸರ್ವ್ ಮಾಡಿ.
ಚಂದ್ರಕಲಾ
ಸಾಮಗ್ರಿ
ಗೋಧಿ ಹಿಟ್ಟು 1 ಕಪ್, 2 ಚಮಚ ತುಪ್ಪ, ಉಪ್ಪು, ಸೋಡ ಚಿಟಿಕೆ, ಸಕ್ಕರೆ 2 ಕಪ್, ಹಾಲು 1 ಚಮಚ, ಲವಂಗ, ಏಲಕ್ಕಿ 2, ಒಣ ಕೊಬ್ಬರಿ 3 ಚಮಚ, ಚಿಕ್ಕದಾಗಿ ಕಟ್ ಮಾಡಿಕೊಂಡ ಖರ್ಜೂರ 3 ಚಮಚ, ಗಸಗಸೆ 1 ಚಮಚ, ಬೆಲ್ಲದ ಪುಡಿ 3 ಚಮಚ, ಚಿಕ್ಕದಾಗಿ ಕಟ್ ಮಾಡಿದ ಗೊಡಂಬಿ ದ್ರಾಕ್ಷಿ 1 ಚಮಚ
ವಿಧಾನ :
1ಕಪ್ ಗೋಧಿ ಹಿಟ್ಟು, 2 ಚಮಚ ತುಪ್ಪ , ಚಿಟಿಕೆ ಸೋಡ, ಚಿಟಿಕೆ ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಮುಚ್ಚಿಡಿ. ಇನ್ನೊಂದು ಪಾತ್ರೆಲಿ 2ಕಪ್ ಸಕ್ಕರೆ, ಮುಳುಗುವಷ್ಟು ನೀರು,2 ಲವಂಗ,2 ಏಲಕ್ಕಿ,1ಸ್ಪೂನ್ ಹಾಲು ಹಾಕಿ ಕುದಿಸಿ ಅಂಟು ಪಾಕ ಆದ್ರೆ ಸಾಕು.... ಹಾಲು ಹಾಕೋದ್ರಿಂದ ಸಕ್ಕರೆಯಲ್ಲಿ ಇರೋ ಕಲ್ಮಶ ಮೇಲೆ ಬರುತ್ತದೆ.
ಸ್ಟಫ್ ಮಾಡೋಕೆ ಕಟ್ ಮಾಡಿರೋ ಗೋಡಂಬಿ, ದ್ರಾಕ್ಷಿ, ಕರ್ಜೂರ, ಕೊಬ್ಬರಿತುರಿ, ಬೆಲ್ಲದ ಪುಡಿ ಎಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಗೋಧಿಹಿಟ್ಟು ರೌಂಡ್ ಶೇಪ್ ಲಿ ಚಿಕ್ಕ ಚಿಕ್ಕ ದಾಗಿ ಒತ್ತಿ ಡ್ರೈಫ್ರೂಟ್ಸ್ ಮಿಶ್ರಣವನ್ನು ತುಂಬಿ ಮಡಿಚಿ ಕರಿಯಿರಿ ಗೋಲ್ಡನ್ ಬ್ರೌನ್ ಆದ ನಂತರ ತೆಗೆದು ಪಾಕದಲ್ಲಿ ಹಾಕಿ 15 ನಿಮಿಷ ಬಿಟ್ಟು ತೆಗೆದರೆ ಚಂದ್ರಕಲಾ ಸಿದ್ಧ