ಬಾಗಲಕೋಟೆ ಹೋಳಿಗೆ ಸಾಂಸ್ಕೃತಿಕ ಮಾನ್ಯತೆ: ಸಚಿವ ಲಿಂಬಾವಳಿ ಘೋಷಣೆ
ನಾಡನುಡಿ ನ್ಯೂಸ್
ಬಾಗಲಕೋಟೆ:
ಐತಿಹಾಸಿಕ ಬಾಗಲಕೋಟೆ ಹೋಳಿ ಹುಣ್ಣಿಮೆಗೆ ಸಾಂಸ್ಕೃತಿಕ ಮಾನ್ಯತೆ ನೀಡಿ ಅನುದಾನ ಒದಗಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಘೋಷಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಸಲಹೆ ಮೇರೆಗೆ ಬಾಗಲಕೋಟೆ ಹೋಳಿಗೆ ಸಾಂಸ್ಕೃತಿಕ ಮಾನ್ಯತೆ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಒದಗಿಸಲಾಗುವುದು ಎಂದು ಅವರು ಹೇಳಿದರು.
ಇದೇ ವರ್ಷದಿಂದ ಸಾಧ್ಯವಾದ ಕಾರ್ಯಕ್ರಮಗಳನ್ನು ಹೋಳಿ ಸಂದರ್ಭದಲ್ಲಿ ಆರಂಭಿಸಲಾಗುವುದು.ಅದಕ್ಕೆ ಅಗತ್ಯವಿರುವ ಕ್ರಮಕೈಗೊಳ್ಳಲಾಗುವುದು ಎಂದರು.