ಕರ್ತವ್ಯ ಲೋಪ : ವಿಜಯಲಕ್ಷ್ಮೀ ಸರೂರ ಸೇವೆಯಿಂದ ವಜಾ
ಬಾಗಲಕೋಟೆ: ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಸ್ತ್ರೀರೋಗ ಅಟೆಂಡರಾಗಿ ಗುತ್ತಿಗೆ ಆದಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವಿಜಯಲಕ್ಷ್ಮೀ ಸರೂರ ಅವರನ್ನು ಕರ್ತವ್ಯ ಲೋಪ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆದಡಿ ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಆದೇಶ ಹೊರಡಿಸಿದ್ದಾರೆ.
ಸರಕಾರಿ ಕಚೇರಿಯಲ್ಲಿ ಗುತ್ತಿಗೆ ಸೇವೆ ಸಲ್ಲಿಸುತ್ತಿರುವ ಸರೂರ ಅವರು ಸಂಜೆ ದರ್ಶನ ಪತ್ರಿಕೆ ಹಾಗೂ ಪಬ್ಲಿಕ್ ಆಪ್‍ನಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬೀಳಗಿ ಹಾಗೂ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಕುರುಬ ಸಮಾಜದ ಮುಖಂಡರು ಒತ್ತಾಯ ಮಾಡಿರುತ್ತಾರೆ ಎಂದು ಹೇಳಿಕೆ ನೀಡಿ ಎಪ್ರೀಲ್ 18 ರಂದು ನಾಮಪತ್ರ ಸಲ್ಲಿಕೆ ಮಾಡಿ ಮತಯಾಚನೆ ಮಾಡಲಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಸಿಬ್ಬಂದಿಯ ಅಶಿಸ್ತು ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದಕ್ಕಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದರು ಸಮಜಾಯಿಸಿ ಉತ್ತರ ನೀಡಿರುತ್ತಾರೆ.
ಸಮಜಾಯಿಸಿ ನೀಡಿರುವ ವಿವರಣೆಯನ್ನು ಪರಿಶೀಲಿಸಲಾಗಿ ತಮ್ಮ ಮೇಲಿರುವ ಆಪಾದನೆ ಅಲ್ಲಗಳೆದಿರುವ ಕಾರಣ ಈ ವಿಷಯದ ಬಗ್ಗೆ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ಯುಕೆಪಿಯ ಮಹಾವ್ಯವಸ್ಥಾಪಕರಿಗೆ ಸೂಚಿಸಿದ್ದರು. ಪರಿಶೀಲನೆಯಲ್ಲಿ ಉಲ್ಲಂಘನೆ ಕಂಡುಬಂದಿರುವುದಾಗಿ ತಿಳಿಸಿ ಮುಂದಿನ ಸೂಕ್ತ ನಿರ್ಣಯ ಹೊರಡಿಸಲು ಸಮಿತಿಗೆ ಸಭೆಗೆ ಮಂಡಿಸಲಾಗಿತ್ತು. ಸರೂರವರ ಅಶಿಸ್ತು ವರ್ತನೆ ಕಂಡು ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಹಾಗೂ ಸದಸ್ಯರಾದ ಜಿ.ಪಂ ಸಿಇಓ, ಸಮಾಜ ಕಲ್ಯಾಣ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಜಿಲ್ಲಾ ಆಯುಷ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಆಯುಷ ಆಯ್ಕೆ ಸಮಿತಿಯ ತಿರ್ಮಾನದ ಮೇರೆಗೆ ಸದರಿ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಛಾಯಾಚಿತ್ರ & ವಿಡಿಯೋ ಲಗತ್ತಿಸಿದೆ.