ಐದು ಕೋಟಿ ಗರಿ, ಗರಿ ನೋಟು ವಶಕ್ಕೆ...!

ಐದು ಕೋಟಿ ಗರಿ, ಗರಿ ನೋಟು ವಶಕ್ಕೆ...!


ಬಾಗಲಕೋಟೆ :ದಾಖಲೆಯಿಲ್ಲದೇ ಸಾಗಿಸುತ್ತಿದ್ದ ೫ ಕೋಟಿ ರೂ.ಗಳನ್ನು ಮುಧೋಳ ತಾಲೂಕು ಲೋಕಾಪುರ ಪಟ್ಟಣ ಬಳಿಯ ಲಕ್ಷಾನಟ್ಟಿ ಚೆಕ್‌ಪೋಸ್ಟ್ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿಯಿಂದ ಮುಧೋಳ ಯೂನಿಯನ್ ಬ್ಯಾಂಕ್‌ಗೆ ಸಾಗಿಸಲಾಗುತ್ತಿದ್ದ  ಹಣ ಇದಾಗಿದೆ ಎಂದು ಹೇಳಲಾಗಿದ್ದು, ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ನಗದು ಹಾಗೂ ಹಣ ಸಾಗಿಸುತ್ತಿದ್ದ ವಾಹನದಲ್ಲಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಪರಿಶೀಲನೆ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.