ಬಡಾವಣೆ ಹುಡುಕಾಟದಲ್ಲಿ ಬುಡಾ...!
ಎಲ್ಲ ವರ್ಗಗಳಿಗೂ ಕಡಿಮೆ ವೆಚ್ಚದಲ್ಲಿ ನಿವೇಶನ ಒದಗಿಸುವ ಗುರಿಯೊಂದಿಗೆ ಆರಂಭಗೊಂಡಿರುವ ಬುಡಾ ಆ ಕಾರ್ಯಕ್ಕೆ ಚಾಲನೆ ನೀಡಿದೆ.
ನಾಡನುಡಿ ನ್ಯೂಸ್
ಬಾಗಲಕೋಟೆ: ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಕಾರ್ಯವನ್ನು ಚುರುಕುಗೊಳಿಸಿದೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಾಧಿಕಾರವು ತನ್ನ ವ್ಯಾಪ್ತಿಯನ್ನು ೨೬ಕ್ಕೂ ಹೆಚ್ಚು ಹಳ್ಳಿಗಳಿಗೆ ವಿಸ್ತರಿಸಿಕೊಳ್ಳುತ್ತಿದೆ.
ಬಸಲಿಂಗಪ್ಪ ನಾವಲಗಿ ಅವರು ಅಧ್ಯಕ್ಷರಾಗಿರುವ ಪ್ರಾಧಿಕಾರದ ಮೊದಲ ಸಭೆ ಇತ್ತೀಚೆಗೆ ಶಾಸಕ ಡಾ.ವೀರಣ್ಣ ಚರಂತಿಮಠ ಸಮ್ಮುಖದಲ್ಲಿ ನಡೆದು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿತ್ತು.
ಖಾಸಗಿ ಅವರಿಂದ ಜಾಗ ಪಡೆದು ೫೦:೫೦ ಅನುಪಾತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಜಾಗ ನೀಡಿದ ಮಾಲೀಕರಿಗೆ ಶೇ.೫೦ ನಿವೇಶನಗಳನ್ನು ಬಿಟ್ಟುಕೊಡುವ ಒಪ್ಪಂದ ಬುಡಾ ಮತ್ತು ಜಾಗದ ಮಾಲೀಕತ ಮಧ್ಯೆ ಏರ್ಪಟ್ಟಿರುತ್ತದೆ.
ಬುಡಾ ಆರಂಭಗೊಂಡು ಮೊದಲ ಆರು ತಿಂಗಳ ಅವಧಿಯಲ್ಲಿ ಒಂದು ಬಡಾವಣೆ ಸಿದ್ಧಗೊಂಡರೆ ಪ್ರಾಧಿಕಾರದ ಜನರಿಗೆ ತಿಳಿಯಲಿದೆ ಹೀಗಾಗಿ ಮೊದಲು ಆ ಕಾರ್ಯವನ್ನು ಚುರುಕಿಗೊಳಿಸುವಂತೆ ಡಿಸಿ ಕ್ಯಾಪ್ಟನ್ ರಾಜೇಂದ್ರ ಇತ್ತೀಚೆಗೆ ಸೂಚಿಸಿದ್ದರು. ಅದನ್ನು ಗಂಭೀರವಾಗಿ ಸ್ವೀಕರಿಸಿರುವ ಪ್ರಾಧಿಕಾರ ಜಾಗೆ ಹುಡುಕುವ ಕಾರ್ಯವನ್ನು ಚುರುಕುಗೊಳಿಸಿದೆ.
ಮಂಗಳವಾರ ಪ್ರಾಧಿಕಾರದ ಅಧ್ಯಕ್ಷ ನಾವಲಗಿ ಅವರು ಸದಸ್ಯರಾದ ಗುಂಡು ಶಿಂಧೆ, ಜಯಂತ ಕುರಂದವಾಡ, ಈರಪ್ಪ ಐಕೂರ, ಚಂದ್ರಪ್ರಕಾಶ ಚೌಧರಿ, ಪ್ರಾಧಿಕಾರದ ಆಯುಕ್ತ ಗಣಪತಿ ಪಾಟೀಲ, ಅಧಿಕಾರ ರಂಜನಾ ಮತ್ತಿತರರು ಸ್ಥಳ ಪರಿಶೀಲನೆ ನಡೆಸಿದರು.