ಬಾಗಲಕೋಟೆಯಲ್ಲಿ ಲಾಡ್ಜಿಂಗ್ ಉದ್ಯಮಕ್ಕೆ ಬುನಾದಿ ಹಾಕಿದ್ದ ಉದ್ಯಮಿ ಇನ್ನಿಲ್ಲ..!
ಬಾಗಲಕೋಟೆ:
ಬಾಗಲಕೋಟೆಯಲ್ಲಿ ಲಾಡ್ಜಿಂಗ್ ಉದ್ಯಮವನ್ನು ಪ್ರಪ್ರಥಮಬಾರಿಗೆ ಆರಂಭಿಸಿದ್ದ ಉದ್ಯಮಿ ಜನಾರ್ಧನರಾವ್ ಮಾರ್ಕೊಡ(೯೬) ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರಿಯರು, ೬ ಜನ ಪುತ್ರರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರು ಆರಂಭಿಸಿದ್ದ ಶ್ರೀಪದ್ಮನಾಭ ಭವನ(ಎಸ್.ಪಿ.ಸಿ.) ಹೊಟೇಲ್ ಮತ್ತು ಆ್ಯಂಡ್ ಲಾಡ್ಜ್ ಪ್ರಸಿದ್ಧವಾಗಿತ್ತು. ಈ ಹೊಟೇಲ್ ನಲ್ಲಿ ಸಿಗುತ್ತಿದ್ದ ಬ್ರೇಡ್, ಚಟ್ನಿ ಅತ್ಯಂತ ಜನಪ್ರಿಯವಾಗಿತ್ತು.
ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು ಉಡುಪಿ ಪೇಜಾವರ ಶ್ರೀಗಳಿಗೂ ಆಪ್ತರಾಗಿದ್ದರು
ಮೃತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ ೯.೩೦ಕ್ಕೆ ಹಳೆ ಎಪಿಎಂಸಿ ಬಳಿಯ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.