ಪ್ರೀತಿಸಿದ ಹುಡುಗಿಯನ್ನು ಕೊಂದ ಭಗ್ನ ಪ್ರೇಮಿ
ನಾಡನುಡಿ ನ್ಯೂಸ್
ಬಾಗಲಕೋಟೆ:
ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜತೆ ಸಖ್ಯ ಬೆಳೆಸಿದ್ದಳು ಎಂದು ಅನುಮಾನಗೊಂಡು ಅವಳನ್ನು ಭಗ್ನ ಪ್ರೇಮಿಯೊಬ್ಬ ಕೊಲೆ ಮಾಡಿರುವ ಧಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ.
( ಕೊಲೆಯಾದ ಜ್ಯೋತಿ)
ಮುಧೋಳ ತಾಲೂಕಿನ ವಜ್ಜರಮಟ್ಟಿಯ ಜ್ಯೋತಿ ಭಾಗವ್ವಗೋಳ(೨೨) ಕೊಲೆಯಾದ ಯುವತಿ, ಕಲಾದಗಿಯ ಹನಿಫ್ ಬೀಳಗಿ(೨೨) ಕೊಲೆ ಮಾಡಿದ ಭಗ್ನ ಪ್ರೇಮಿ.
ಬಾಗಲಕೋಟೆಯ ಆಸ್ಪತ್ರೆಯೊಂದರಲ್ಲಿ ಹನಿಫ್ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಜ್ಯೋತಿ ಅಂತಿಮ ವರ್ಷದ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ್ ಮಾಡುತ್ತಿದ್ದಳು. ಇಬ್ಬರ ನಡುವೆ ಎರಡು ವರ್ಷದ ಹಿಂದೆ ಸ್ನೇಹವಾಗಿ ನಂತರ ಅದು ಪ್ರೇಮಕ್ಕೆ ತಿರುಗಿತ್ತು.
(ಬಂಧಿತ ಹನಿಫ್ )
ಇತ್ತೀಚೆಗೆ ಜ್ಯೋತಿ ಮೇಲೆ ಅನುಮಾನಗೊಳ್ಳುತ್ತಿದ್ದ ಹನಿಫ್ ಫೆ.೧೩ರಂದು ಬೈಕ್ ಮೇಲೆ ಕರೆದುಕೊಂಡು ಕಲಾದಗಿ ಬಳಿಯ ಕಾತರಕಿ ಬ್ರಿಡ್ಜ್ ಬಳಿ ಕೊಲೆ ಮಾಡಿ ನೀರಿಗೆ ಎಸೆದಿದ್ದ.ಜ್ಯೋತಿ ನಾಪತ್ತೆ ಆಗಿರುವ ಬಗ್ಗೆ ಆಕೆಯ ಪಾಲಕರು ಬಾಗಲಕೋಟೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಂಗಳವಾರ ಕಾತರಕಿ ಬ್ರಿಡ್ಜ್ ಬಳಿ ಶವ ಪತ್ತೆಯಾಗಿದ್ದು, ಪೊಲೀಸರು ಹನೀಫ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.