ಶೆಟ್ಟರ್ ಸೇರ್ಪಡೆ ಬೆನ್ನಲ್ಲೇ ಮತ್ತಷ್ಟು ನಾಯಕರು ಬಿಜೆಪಿಗೆ..!

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಸಿಎಂ ಬೊಮ್ಮಾಯಿ ಸವದಿ, ರೆಡ್ಡಿ ಹೊರತಾಗಿ ಮೂಲಕ ಕಾಂಗ್ರೆಸ್ಸಿಗರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ

ಶೆಟ್ಟರ್ ಸೇರ್ಪಡೆ ಬೆನ್ನಲ್ಲೇ ಮತ್ತಷ್ಟು ನಾಯಕರು ಬಿಜೆಪಿಗೆ..!

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ಬಿಜೆಪಿಗೆ ಮರಳಿರುವ ಬೆನ್ನಲ್ಲೆ ಮತ್ತಷ್ಟು ನಾಯಕರು ಬಿಜೆಪಿ ಹಾದಿಹಿಡಿಯಲಿದ್ದಾರೆ ಎ‌ಂದು‌ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆಗೆ ನಾತನಾಡಿದ ಅವರು, ಜನಾರ್ಧನ ರೆಡ್ಡಿ, ಲಕ್ಷ್ಮಣ ಸವದಿ ಅವರಿಗೆ ಬಿಜೆಪಿಗೆ ಮರಳುವುದಿಲ್ಲ ಎಂದಿದ್ದಾರೆ ಅವರ ಹೊರತಾಗಿ ಹಲವು ಬಿಜೆಪಿಗೆ ಬರಲಿದ್ದಾರೆ ಆದರೆ ಅವರು ತಮ್ಮ ಹೆಸರು ಬಹಿರಂಗಪಡಿಸದಂತೆ ಕೋರಿದ್ದಾರೆ. ಮೂಲ ಕಾಂಗ್ರೆಸ್ಸಿಗರೇ ಬಿಜೆಪಿಗೆ ಬರುವುದು ಪಕ್ಕಾ ಎಂದರು.