ಗಣೇಶೋತ್ಸವ ಪ್ರತಿಷ್ಠೆ ಬೇಡ ಸಹನೆ ಇರಲಿ .....

ಗಜಾನನೋತ್ಸವ ಅಗಸ್ಟ ೨೨ ರಿಂದ ನಡೆಯಲಿದೆ. ಪ್ರತಿ ಬಾರಿ ೫ ದಿನಗಳ ಕಾಲ ಬಾಗಲಕೋಟೆಯಲ್ಲಿ ಪ್ರತಿಷ್ಠಾಪನೆಯಾ ಗುತ್ತಿದೆ. ಅದ್ದೂರಿಯ ಪ್ರತಿಷ್ಠಾಪನೆ, ಅದ್ದೂರಿಯ ವಿಸರ್ಜನೆ ಉತ್ಸವದ ಸಂಪ್ರದಾಯ. ವಿಘ್ನಗಳು ನಿವಾರಣೆಯಾಗಬೇಕು, ಗಣೇಶ ಭವಹರ, ಲೋಕಮಾನ್ಯ ತಿಲಕರು ಪುಣೆಯಲ್ಲಿ ಉತ್ಸವವನ್ನು ಆಚರಿಸಿದಾಗ ಅದಕ್ಕೆ ಸ್ವಾತಂತ್ರೋತ್ಸವದ ಕಿಚ್ಚು ಇತ್ತು. ಜಾತಿ, ಬೇಧ ಮರೆತು ಉತ್ಸವ ಆಚರಣೆಯಾಗಬೇಕು, ರಾಷ್ಟ್ರಾಭಿಮಾನ ಮೊಳಗಬೇಕು ಎಂಬುದು ಅವರ ಆಶಯವಾಗಿತ್ತು.

ಗಣೇಶೋತ್ಸವ ಪ್ರತಿಷ್ಠೆ ಬೇಡ ಸಹನೆ ಇರಲಿ .....
ಗಜಾನನೋತ್ಸವ ಅಗಸ್ಟ ೨೨ ರಿಂದ ನಡೆಯಲಿದೆ. ಪ್ರತಿ ಬಾರಿ ೫ ದಿನಗಳ ಕಾಲ ಬಾಗಲಕೋಟೆಯಲ್ಲಿ ಪ್ರತಿಷ್ಠಾಪನೆಯಾ ಗುತ್ತಿದೆ. ಅದ್ದೂರಿಯ ಪ್ರತಿಷ್ಠಾಪನೆ, ಅದ್ದೂರಿಯ ವಿಸರ್ಜನೆ ಉತ್ಸವದ ಸಂಪ್ರದಾಯ. ವಿಘ್ನಗಳು ನಿವಾರಣೆಯಾಗಬೇಕು, ಗಣೇಶ ಭವಹರ, ಲೋಕಮಾನ್ಯ ತಿಲಕರು ಪುಣೆಯಲ್ಲಿ ಉತ್ಸವವನ್ನು ಆಚರಿಸಿದಾಗ ಅದಕ್ಕೆ ಸ್ವಾತಂತ್ರೋತ್ಸವದ ಕಿಚ್ಚು ಇತ್ತು. ಜಾತಿ, ಬೇಧ ಮರೆತು ಉತ್ಸವ ಆಚರಣೆಯಾಗಬೇಕು, ರಾಷ್ಟ್ರಾಭಿಮಾನ ಮೊಳಗಬೇಕು ಎಂಬುದು ಅವರ ಆಶಯವಾಗಿತ್ತು. ಅದಕ್ಕೆ ದೇಶದಾದ್ಯಂತ ಸ್ಪಂದನೆಯೂ ಸಿಕ್ಕಿತು. ಎಂತಹದೇ ಕಷ್ಟ, ಸಂಕಷ್ಟಗಳು ಬಂದಾಗ ಗಣೇಶನ ಹಬ್ಬ ನಿಂತಿಲ್ಲ. ಇದು ಸಾರ್ವಜನಿಕ ಸಂಭ್ರಮ, ರಾಷ್ಟ್ರೀಯ ಹಬ್ಬ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೋರೋನಾ ಮಹಾಮಾರಿ ಸಾಮಾಜಿಕ ಚಿತ್ತವನ್ನು ದೃತಿಗೆಡಿಸಿದೆ. ಆರೋಗ್ಯದ ಕಾಳಜಿ ಹುಟ್ಟಿಕೊಂಡಿದೆ. ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ ಕಾರ್ಯಕ್ರಮಗಳೆಲ್ಲವೂ ತಲೆಕೆಳಗಾಗಿವೆ. ಹೊಸ ವರ್ಷಾಚರಣೆಯ ಸಂಭ್ರಮ, ಯುಗಾದಿ ಮೊದಲು ಮಾಡಿ ಬಹುತೇಕ ಹಬ್ಬಗಳು ಮನೆಗೆ ಸೀಮಿತವಾದವು. ಕಳೆದ ೫ ತಿಂಗಳುಗಳಿಂದ ನಡೆದಿರುವ ಎಲ್ಲ ಉತ್ಸವಗಳಿಗೂ ಬರ ಬಿದ್ದಿದೆ. 
ಆದರೆ ಗಣೇಶ ಉತ್ಸವಕ್ಕೆ ಅಡ್ಡಿಪಡಿಸಬೇಡ, ಕೋವಿಡ್ ನಿಯಮಗಳನ್ನು ಪಾಲಿಸಿ ಉತ್ಸವ ಆಚರಿಸುತೆವೆ, ಅವಕಾಶ ಕೊಡಿ ಎಂದು ಹಿಂದು ಸಂಘಟನೆಗಳು, ಗಣೇಶ ಉತ್ಸವ ಕೆಲ ಸಮಿತಿಗಳು ಬೇಡಿಕೆ ಇಟ್ಟಿವೆ. ಈ ಬೇಡಿಕೆ ಪ್ರಸ್ತಾವನೆಯಾಗುವ ಮೊದಲೇ ಜಿಲ್ಲಾಡಳಿತ ಉತ್ಸವವನ್ನು ನಿರ್ಬಂಧಿಸಿದೆ. ಮಾರ್ಚ ೩೧ ರಿಂದ ಕೋರೋನಾ ಬಾಗಲಕೋಟೆ ಜಿಲ್ಲೆಯನ್ನು ವ್ಯಾಪಿಸಿದೆ. ಆರಂಭದಲ್ಲಿ ಸಾಕಷ್ಟು ನಿಯಂತ್ರಣದಲ್ಲಿತ್ತು, ಸರಕಾರದ ಕಣ್ಗಾವಲು ಇತ್ತು, ಜನರಲ್ಲಿ ಭಯವೂ ಇತ್ತು, ಆದರೆ ಈಗ ಎಲ್ಲವೂ ಮರೆಯಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸರಕಾರ ದಿನದಿಂದ ದಿನಕ್ಕೆ ನಿಯಮಗಳನ್ನು ಸರಳೀಕರಣಗೊಳಿಸುತ್ತ ಹೋಗುತ್ತಿದೆ, ಇದೊಂದು ಸಮಾಜದ ಭಾಗ ಎಂದು ಸ್ವೀಕರಿಸುವ ಮಟ್ಟಿಗೆ ವಾತಾವರಣ ನಿರ್ಮಾಣವಾಗಿದೆ. ಜನರಲ್ಲಿಯೂ ಆತಂಕ ಇದ್ದರೂ ಮೈಮರೆತಂತೆ ವರ್ತಿಸುತ್ತಿದ್ದಾರೆ. ಇವುಗಳ ಮಧ್ಯೆ ಉತ್ಸವ ಆಚರಣೆಯಾಗಬೇಕೇ ? ಆಗಬಾರದು ? ಎಂಬ ಜಿeಸೆ ಮೂಡಿದೆ. ಉತ್ಸವ ಆಚರಣೆಯಾಗಬೇಕೆ ನ್ನುವವರು, ಉತ್ಸವ ಆಚರಣೆ ಮಾಡಬಾರದೆಂದು ಹೇಳುವ ಜಿಲ್ಲಾಡಳಿತ ಇಬ್ಬರು ಪ್ರತಿಷ್ಠೆಯನ್ನಾಗಿ ಇಟ್ಟುಕೊಳ್ಳಬಾರದು. ರಾಜ್ಯ ಸರಕಾರದ ನಿಯಮಗಳನ್ನು ಅನುಸರಿಸಿ ಜಿಲ್ಲಾಡಳಿತ ಹೆಜ್ಜೆ ಇಡಬೇಕು. ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲಿ ಉತ್ಸವ ಆಚರಣೆಗೆ ನಿರ್ಬಂಧ ಹೇರಿದ್ದರೆ ಅದು ಬಾಗಲಕೋಟೆಯಲ್ಲಿಯೂ ಅನುಷ್ಠಾನಗೊಳ್ಳಲಿ. ಉಳಿದ ಕಡೆ ಸೀಮಿತ ಅವಕಾಶ ಮಾಡಿಕೊಟ್ಟಿದ್ದರೆ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆಗಳನ್ನು ವಿಸರ್ಜಿಸಿ ಗಣೇಶ ವಿಗ್ರಹ ಸ್ಥಾಪನೆ ಸಾಮಾಜಿಕ ಅಂತರದಲ್ಲಿ ದರ್ಶನ, ಪೂಜಾ ವಿಧಾನಕ್ಕೆ ಸೀಮಿತಗೊಳಿಸಬೇಕು. ಯಾವದೇ ಪ್ರಸಾದ ವಿತರಣೆ ಮಾಡದೇ ಅನಿವಾರ್ಯವಾದರೆ ಒಂದೇ ದಿನಕ್ಕೆ ಅವಕಾಶ ಮಾಡಿಕೊಡುವದು ಸೂಕ್ತ. ಅದು ಕೂಡ ಇತರೆ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಅನುಸರಿಸುವ ವಿಧಾನವನ್ನು ಇಲ್ಲಿ ಅನುಸರಿಸಬೇಕು. ಉಳಿದ ಜಿಲ್ಲೆಗಳಲ್ಲಿ ಉತ್ಸವ ಆಚರಣೆಗೆ ಅವಕಾಶ ನೀಡಿಲ್ಲವಾದರೆ ಇಲ್ಲಿಯೂ ಆಚರಣೆಗೆ ಅವಕಾಶ ನೀಡಬಾರದು. ಅಲ್ಲಿ ಜಿಲ್ಲಾಡಳಿತದೊಂದಿಗೆ ಸಂಘಟನೆಗಳು ಸಹಕರಿಸಿದಂತೆ ಇಲ್ಲಿಯೂ ಸಹಕರಿಸಲಿ. ಉಳಿದೆಡೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದ್ದರೆ ಇಲ್ಲಿಯೂ ಅವಕಾಶ ಮಾಡಿಕೊಟ್ಟು ಸಂಘಟನೆಗಳೊಂದಿಗೆ ಜಿಲ್ಲಾಡಳಿತ ಸಹಕರಿಸಲಿ. ಇದು ಪರಸ್ಪರ ಮಾತುಕತೆಯ ಮೂಲಕ ಇತ್ಯರ್ಥವಾಗಬೇಕಾಗಿರುವ ವಿಚಾರವೇ ವಿನಃ ಪತ್ರಿಕಾಗೋಷ್ಠಿ, ನೋಟಿಸು ಜಾರಿ ಮಾಡುವದು, ಆದೇಶದ ಮೂಲಕ ಅನುಷ್ಠಾನಗೊಳಿಸುವದು ಆರೋಗ್ಯಕರ ವಾತಾವರಣವಲ್ಲ, ಸಾರ್ವಜನಿಕವಾಗಿ ಪ್ರತಿಯೊಬ್ಬರು ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು. ಸಂಘಟನೆಗಳು ಹಾಗೂ ಆಡಳಿತ ಪರಸ್ಪರ ಸಹಕಾರದೊಂದಿಗೆ ವರ್ತಿಸಿ ಪ್ರತಿಷ್ಠೆಯನ್ನು ಕೈಬಿಟ್ಟು ಸೌಜನ್ಯವನ್ನು ಮೆರೆಯಬೇಕು, ಯಾರೂ ಸಂಯಮ ಮೀರಬಾರದು, ಇದು ನಮ್ಮ ಸಂಯಮ.