ಮುಳುಗುವ ಹಡಗಿನ ನಾವಿಕರಾಗಿ ಖರ್ಗೆ: ಗೋವಿಂದ ಕಾರಜೋಳ ವ್ಯಂಗ್ಯ
ಬಾಗಲಕೋಟೆಯಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆ:
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾರಥ್ಯ ಒದಗಿದರೆ ಅವರು ಮಳುಗುವ ಹಡಗಿನ ನಾವಿಕರಾದಂತೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಳಗುವ ಹಡಗಿಗೆ ನಾವಿಕನನ್ನಾಗಿ ಖರ್ಗೆ ಅವರನ್ನು ಮಾಡಲು ಪಕ್ಷ ಹೊರಟಿದೆ ಎಂದು ಟೀಕಿಸಿದರು.
೧೦ ವರ್ಷ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಅವಾಗಲೇ ಖರ್ಗೆ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತು.ದೇಶದಲ್ಲಿ ಅಧಿಕಾರ ನಡೆಸೋವಾಗ ಅವಕಾಶ ನೀಡಿದರೆ ಅದಕ್ಕೊಂದು ಅರ್ಥ ಬರುತಿತ್ತು ಎಂದು ನುಡಿದರು.
ಹಿರಿಯ ನಾಯಕರಾಗಿರುವ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷ ರಾಜ್ಯದ ಮುಖ್ಯಮಂತ್ರಿಯನ್ನಾಗಿಸಬಹುದಿತ್ತು.ದಲಿತರ ಉದ್ದಾರ ಹಾಗೂ ಅವರಿಗೆ ಹುದ್ದೆ ನೀಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು.