ಲಂಚ ಸ್ವೀಕಾರ ಆರೋಪ : ಜಿಪಂ ಕ್ಲರ್ಕ್ ಅಮಾನತು

ಲಂಚ ಸ್ವೀಕಾರ ಆರೋಪ : ಜಿಪಂ ಕ್ಲರ್ಕ್ ಅಮಾನತು

ನಾಡನುಡಿ ನ್ಯೂಸ್
ಬಾಗಲಕೋಟೆ ಜ.೧೪: ಜಿಲ್ಲಾ ಪಂಚಾಯತ್ ಇಂಜಿನೀಯರಿಂಗ್ ವಿಭಾಗದ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸುರೇಶ ಹರನಾಳ ಅವರನ್ನು ಲಂಚ ಆರೋಪ ಹಿನ್ನೆಲೆಯಲ್ಲಿ ಜಿ.ಪಂ.ಮುಖ್ಯ  ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
     ಗುತ್ತಿಗೆದಾರರೊಬ್ಬರ ಬಿಲ್ ಪಾಸ ಮಾಡಲು ಕಿರುಕುಳ ನೀಡಿ ಕಮೀಷನ್ ಗಾಗಿ ಬೇಡಿಕೆ ಇಟ್ಟಿದ್ದರೆಂಬ ವಿಡಿಯೋ ವೈರಲ್ ಆದ  ಹಿನ್ನೆಲೆ ಹಾಗು ಈ ಸಂಬಂಧ ನೀಡಿರುವ ವಿವರಣೆ ಸಮಂಜಸವಾಗಿಲ್ಲ ಎಂದು ಆದೇಶದಲ್ಲಿ ವಿವರಿಸಿ ಸಿ.ಇ.ಓ ಭೂಬಾಲನ್ ಅವರು ಸುರೇಶ ಹರನಾಳ ಅವರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ತಾವು ಸ್ನೇಹಿತರೊಂದಿಗೆ ತಮಾಷೆಗಾಗಿ ಲಂಚ‌ ಕೇಳಿದ್ದೆ ಎಂದು ಸುರೇಶ ಹರನಾಳ ವಿವರಣೆ ನೀಡಿದ್ದರು.ಆದರೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪರಿಗಣಿಸಿ ಜಿಪಂ ಸಿಇಒ ಅಮಾನತುಗೊಳಿಸಿದ್ದಾರೆ.