ಭಾರತ ಮಾತೆಗೆ ಜೈಕಾರ: ನಾಲಿಗೆ ಹರಿಬಿಟ್ಟ ಉಸ್ಮಾನ್ ಘನಿ ವಿರುದ್ಧ ಹೆಚ್ಚಿದ ಆಕ್ರೋಶ

ಭಾರತ ಮಾತೆಗೆ ಜೈಕಾರ: ನಾಲಿಗೆ ಹರಿಬಿಟ್ಟ ಉಸ್ಮಾನ್ ಘನಿ ವಿರುದ್ಧ ಹೆಚ್ಚಿದ ಆಕ್ರೋಶ

ನಾಡನುಡಿ ನ್ಯೂಸ್ 
ಬಾಗಲಕೋಟೆ:
ಭಾರತ ಮಾತೆಗೆ ಜೈಕಾರ ಹಾಕುವ ಬಗ್ಗೆ ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಘನಿ ಹುಮ್ನಾಬಾದ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಜಿಲ್ಲಾದ್ಯಂತ ಆಕ್ಷೇಪ ವ್ಯಕ್ತವಾಗಿದೆ.

ಇಳಕಲ್‌ ನಗರದಲ್ಲಿ ಅಬ್ದುಲ್ ಕಲಾಂ ವೃತ್ತ ಉದ್ಘಾಟನೆ ವೇಳೆ ಉಸ್ಮಾನ್ ಗಣಿ ನಾಲಿಗೆ ಹರಿಬಿಟ್ಟಿದ್ದು, ದೇಶಭಕ್ತರ ಕೆಂಗಣ್ಣಿಗೆ ಗುರಿ ಆಗಿದ್ದಾರೆ.

ಇಳಕಲ್ ನಗರ ಠಾಣೆಯಲ್ಲಿ ಉಸ್ಮಾನ್ ಘನಿ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು ಪೊಲೀಸರು ಬಂಧಿಸಬೇಕೆಂದು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಒತ್ತಡ ಹಾಕುತ್ತಿದ್ದಾರೆ.

 ಒಬ್ಬ ಮಗುವಿಗೆ ಜನ್ಮನೀಡಲು ಒಬ್ಬ ತಾಯಿ ಸಾಕು ಭಾರತ ಮಾತಾ ಕಿ ಜೈ, ಗಂಗಾಮಾತಾಕಿ ಜೈ ಎನ್ನುತ್ತಾ ಹೋದರೆ ಕಂಡವರಿಗೆಲ್ಲ ತಾಯಿ ಎಂದಂತಾಗುತ್ತದೆ ಎಂದು ಉಸ್ಮಾನ್ ಘನಿ ವಿವಾದ ಸೃಷ್ಟಿಸಿದ್ದರು.

ಈ ವಿಚಾರವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಕೂಡ ಪ್ರತಿಕ್ರಿಯಿಸಿದ್ದು, ಭಾರತ ಮಾತೆಗೆ ಜೈಕಾರ ಕೂಗದವರು ದೇಶ ಬಿಟ್ಟು ತೊಲಗಲಿ ಎಂದು ಖಾರವಾಗಿ ಹೇಳಿದ್ದಾರೆ.

ಭಾರತದಲ್ಲಿ ಹುಟ್ಟಿದ ಮೇಲೆ ಜೈಕಾರ ಹೇಳಲೇ ಬೇಕು. ಇಲ್ಲದಿದ್ದರೆ ಅಂಥವರು ಈ ನೆಲದಲ್ಲಿ ಇರಲು ನಾಲಾಯಕರು. ಭಾರತ ಮಾತೆ ನಮ್ಮ ತಾಯಿ, ಗೋಮಾತೆ, ಗಂಗಾಮಾತೆ ನಮ್ಮ ಭಾವನೆಗಳು ಅದನ್ನು ಗೌರವಿಸಬೇಕೆಂರು ಉಸ್ಮಾನ್ ಘನಿಯ ಕಿವಿ ಹಿಂಡಿದ್ದಾರೆ.

ಇನ್ನೂ ಇಂಥ ದೇಶದ್ರೋಹಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜಾರಿಯಾಗಬೇಕು. ಪೊಲೀಸರು ಸುಮೋಟೊ ಕೇಸ್ ದಾಖಲಿಸಬೇಕೆಂದೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.