ನಿರಾಣಿ ಸಮೂಹದ ತೆಕ್ಕೆಗೆ ರನ್ನ ಸಕ್ಕರೆ ಕಾರ್ಖಾನೆ...?
ಮುಧೋಳದ ರನ್ನ ಸಕ್ಕರೆ ಕಾರ್ಖಾನೆ ನಿರಾಣಿ ಸಮೂಹದ ತೆಕ್ಕೆಗೆ ಸೇರಿದೆ ಎನ್ನಲಾಗಿದೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ಮುಧೋಳ ತಾಲೂಕು ರನ್ನನಗರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿರಾಣಿ ಸಮೂಹದ ತೆಕ್ಕೆಗೆ ಬಿದ್ದಿದೆ ಎನ್ನಲಾಗಿದೆ.
ಕಾರ್ಖಾನೆ ನಷ್ಟದಲ್ಲಿದ್ದ ಕಾರಣ ಖಾಸಗಿ ಅವರಿಗೆ ಗುತ್ತಿಗೆ ನೀಡಲು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿತ್ತು.
ಅದಾದ ನಂತರ ಗುತ್ತಿಗೆ ಪ್ರಕ್ರಿಯೆ ನಡೆಸಲಾಗಿದ್ದು, ಶಾಸಕ ಮುರುಗೇಶ ನಿರಾಣಿ ಸಮೂಹ ೪೦ ವರ್ಷದ ಗುತ್ತಿಗೆ ಪಡೆಯಲು ಮುಂದಾಗಿದೆ ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ನಿರಾಣಿ ಕಂಪನಿ ಒಂದೇ ಗುತ್ತಿಗೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಈ ಹಿನ್ನೆಲೆಯಲ್ಲಿ ರಿಟೆಂಡರ್ ಪ್ರಕ್ರಿಯೆ ಆಡಳಿತ ಮಂಡಳಿ ಮನವಿ ಮಾಡಲಿದೆ ಎನ್ನಲಾಗಿದೆ. ಈ ಮಾಹಿತಿಗಳು ಇನ್ನಷ್ಟೇ ಖಚಿತಪಡಬೇಕಿದೆ.